ಮಕ್ಕಳ ಸೌಭಾಗ್ಯ.
ಯೂನಿಫಾರ್ಮ್ ಹಾಕುತ
ಶೂ, ಶಾಕ್ಸ್ ಹಾಕಿ ಟಕ್ ಟಕ್
ಕುಣಿಯುತ ನಲಿಯುತ
ಹಾಲನು ಕುಡಿಯುತ
ಅನ್ನವನುನ್ನುತ ಬರುವರು
ಚಿಣ್ಣರು ಸರಕಾರಿ ಶಾಲೆಗೆ.
ಸಮಾನತೆಯ ಸಾರುತ
ಸತ್ಯ, ಸಾಧನೆಯ ದೃಢತೆ ತುಂಬುತ
ಸಾಗಿ ಬಂದರು ಮಕ್ಕಳು
ಸರಕಾರಿ ಶಾಲೆಯತ್ತ.
ಶಿಸ್ತು, ಸಂಸ್ಕಾರ ತಿಳಿಯುತ
ಜ್ಞಾನ ಧಾರೆಯನು ತಲೆಯಲೀ
ತುಂಬಿಕೊಳ್ಳುತ ಎಲ್ಲೆಡೆ ಜ್ಞಾನ
ದೀವಿಗೆ ಬೆಳಗುತ.
ಆರೋಗ್ಯಕರ ದೇಹ
ಆರೋಗ್ಯಕರ ಮನಸು
ಹೊಂದುತ ಮೇಲು, ಕೀಳು
ಭೇದ ಭಾವ ಮರೆಸುತ
ಬಡವ, ಬಲ್ಲಿದನೆಂಬ ಭ್ರಾಂತಿ ತೊಲಗಿಸುತ
ನಾಳೆಯ ನಾಡಿನ ಪ್ರಜೆಗಳಾಗುತ
ಸುಜ್ಞಾನ ಸುಧೆಯ ಸಿಂಚನ ಗೈಯುತ
ದೇಶ ಕಟ್ಟುವ ಯೋಧರಾಗುತ
ಬರುವರು ಸರಕಾರಿ ಶಾಲೆಗೆ ಮಕ್ಕಳು
ಎಲ್ಲ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಲು
ಕಲಿಯಲು ಬರುವರು ಸರಕಾರಿ ಶಾಲೆಗೆ.
ಇದುವೇ ಅವರ ಭಾಗ್ಯ
ಇರಲಿಲ್ಲ ನಮಗೆ ಆಗ ಈ ತರ ಸೌಭಾಗ್ಯ.
ಅದನ್ನು ನಾವು ಮಕ್ಕಳಲ್ಲಿ ನೋಡುವುದೇ ಒಂದು ವೈಭೋಗ್ಯ.
ಉಮಾದೇವಿ. ಯು. ತೋ ಟಗಿ.
ಸ. ಶಿ. ಸ. ಕ .ಪ್ರಾ. ಶಾ. ರಾಮಾಪುರ.
ತಾ. ಸವದತ್ತಿ. ಜಿ. ಬೆಳಗಾವಿ.
.