ಹಸಿರ ಸಿರಿ.
ಬೊಡ್ಡೆ ಕಪ್ಪು ಎಲೆ ಹಸಿರು
ಹೂಗಳ ಬಣ್ಣ ವಿಧ ವಿಧ.
ಎಂಥ ಅಂದ ಏನು ಚೆಂದ
ಸೊಗಸು ತೋರುತ್ತಿವೆ ಗಿಡ ಮರ
ಹಸಿರನ್ನುಟ್ಟು ಹೂ, ಹಣ್ಣುಗಳ
ಆಭರಣ ತೊಟ್ಟು ವಿವಿಧ ರುಚಿ
ವಿವಿಧ ಸುವಾಸನೆ ಸೂಸುತ
ಬೆಳೆದು ನಿಂತಿವೆ ಗಿಡ ಮರ.
ದಣಿದು ಬಂದವರಿಗೆ ನೆರಳು
ಹಸಿದು ಬಂದವರಿಗೆ ಹಣ್ಣು
ದೇವರ ವರ ಪಡೆಯಲು ಹೂ
ಅರಸಿ ಬಂದವರಿಗೆ ಹೂ ಕೊಡುವ
ಪರೋಪಕಾರಿ ಗಿಡ ಬಳ್ಳಿ.
ಯಾರೇ ಬಂದು ಕಲ್ಲೆಸೆದರು ಹೂ
ಕಿತ್ತರು ಎಸ್ಟೆ ನೋವು ಕೊಟ್ಟರು
ತಾಳುವುದೊಂದೆ ದಿವ್ಯ ಮೌನ.
ಎಲ್ಲವೂ ಒಣಗಿ ಎಲೆ ಎಲ್ಲ
ಉದುರಿದರು ಮತ್ತೆ ಚಿಗುರುವ
ಭವ್ಯ ನವ್ಯ ಛಲ.
ಎಲ್ಲ ಉಂಟು ಮನುಷ್ಯನಲ್ಲಿ
ಬೇಡ ಮನುಜ ಹಗೆಯ ಹಂಬಲ
ಕಲಿಯೋ ನೀನು ಹಸಿರ ಸಿರಿಯ
ಮೌನ, ತ್ಯಾಗದ ಮಾದರಿ ಗುಣ.
ಹಸಿರ ಸಿರಿಗೆ ಅಭಿನಂದನೀಯ ಕವನ ಅರ್ಪಣ ಸಮರ್ಪಣ.
ಉಮಾದೇವಿ .ಯು . ತೋಟಗಿ
ಸ. ಶಿ. ಸ. ಕ. ಹೀ. ಪ್ರಾ. ಶಾ. ರಾಮಾಪುರ. ತಾ. ಸವದತ್ತಿ. ಜಿ. ಬೆಳಗಾವಿ.