ಕಳೆದು ಹೋಗುವ ಮುನ್ನ
ಬೇರುರಿನಲ್ಲಿರೋ ಅಪ್ಪ ಅಮ್ಮ . ಕೆಲಸಕ್ಕೆಂದು ಬಂದುಳಿದ ಹೆಂಡತಿ ಮಕ್ಕಳು ನಾನು ಇರುವ ಕುಟುಂಬ ಮತ್ತೊಂದುರು. ಶಿಕ್ಷಣಕ್ಕೆಂದು ಮಕ್ಕಳನ್ನಿಟ್ಟದ್ದು ಮಗದೊಂದು ಊರು. ಅತೀ ವೇಗದ ಬದುಕಿನಲ್ಲಿ
ಕೆಲಸದ ಒತ್ತಡದಲ್ಲಿ ಸ್ನೇಹಿತರು,ಸಂಬಂಧಿಗಳ, ನೆರೆಹೊರೆಯವರ ಕುಹಕ ಅಸಮಾಧಾನದ ದಲ್ಲುರಿಯಲ್ಲಿ
ಕಳೆದು ಹೋಗುವ ಮುನ್ನ
ಉನ್ನೋ ಅನ್ನ ಆಹಾರಗಳ ಕಲಬೆರಕೆಯಲ್ಲಿ ಅನಾರೋಗ್ಯದ ಭಯದಲ್ಲಿ ಬದುಕಿನ ಅಲೆದಾಟದಲ್ಲಿ
ವಿದ್ಯೆಯ ಹಂಬಲದಲ್ಲಿ ಕಳೆದು ಹೋಗುವ ಮುನ್ನ
ತಿಳಿದುಕೋ ಮನುಜ ಈ ಒಂದು ಮಾತು ನೀನೆಲ್ಲವನ್ನು ಕಳೆದುಕೊಂಡಿರಬಹುದು ಅನಿಯಾರ್ಯ ಮತ್ತು ಪರಿಸ್ಥಿತಿಯ ಕೈಗೊಂಬೆ ಆಗಿ.
ಕಳೆದು ಕೊಂಡಿದ್ದೆಲ್ಲವನ್ನು ನೀನೇ ಅರಸಬೇಕು. ಒಳ್ಳೆಯವರನ್ನು ಪರೀಕ್ಷಿಸಿ ಪ್ರೀತಿಸು. ಯಾರಲ್ಲೂ ಅತಿಯಾದ ನಂಬಿಕೆ ಬೇಡ. ತಂದೆ ತಾಯಿ ಸಂಬಂಧಿಕರನ್ನು ಅಪ್ಪಿಕೋ ಒಳ್ಳೆಯದನ್ನು ಮಾಡು. ಆಗುತ್ತಿರುವ ಬದಲಾವಣೆಗಳನ್ನು ಸರಿಯಾಗಿ ಆರ್ಥ ಮಾಡಿಕೊಂಡು ಮುಂದುವರೆ ನಿನ್ನದೇ ಆದ ಸಿದ್ದಾಂತ ನಿನಗೆ ಒಂದು ಉತ್ತಮ ಕಟ್ಟಳೆ ರೂಪಿಸಿಕೊ. ತಪ್ಪಿದ್ದಲ್ಲಿ ತಿದ್ದಿಕೊ. ಪ್ರೀತಿ ಯಾವುದೋ ದ್ವೇಷ ಯಾವುದೋ ವಂಚನೆ ಯಾವುದೋ ಅಸಹನೆ ಯಾವುದೋ ಮುಖವಾಡದ ಬದುಕು ಯಾವುದೋ ಎಂಬುದು ಈ ಜಗತ್ತಿನಲ್ಲಿ ನಿಗೂಢ. ಇದರ ಅರ್ಥ ಮಾಡಿಕೊಳ್ಳದೆ ಏಷ್ಟೋ ಉತ್ತಮ ಕುಟುಂಬಗಳು ನೋವು ಯಾತನೆ ಅನುಭವಿಸುತ್ತಿವೆ. ಇದಕ್ಕೆ ತಕ್ಕ ಪ್ರತಿಫಲ ಕ್ರೂರಿಗಳಿಗೆ ದುಪ್ಪಟ್ಟು ಶಿಕ್ಷೆ ಮೇಲಿದ್ದವರು ಕೊಟ್ಟೆ ಕೊಡುತ್ತಾರೆ.
ದೇವರು ಉತ್ತಮ ನ್ಯಾಯವಾದಿ. ಒಳ್ಳೆಯವರು ಯಾವತ್ತೂ ನ್ಯಾಯ ಮಾರ್ಗ, ಸನ್ನಡತೆ, ಬಿಟ್ಟು ಕೊಡುವುದಿಲ್ಲ. ಲಾಭ ನೋಡುವವರಲ್ಲ ಅವರು. ಅನುಕೂಲ ಸಿಂಧು ಅಂತೂ ಅಲ್ಲವೇ ಅಲ್ಲ. ಎಸ್ಟೇ ಕಷ್ಟ ಬಂದರು ಸಹಿಸಿಕೊಳ್ಳುತ್ತಾರೆ ವಿನಃ ಅಂತ ಹೀನ ಕಾರ್ಯ ಮಾಡೊರಲ್ಲ ಅವರು.
ಅವರಿಗೆ ನಾನು ಕೆಟ್ಟದ್ದನ್ನು ಮಾಡಿಲ್ಲ ಎಂಬ ಪರಮೋಚ್ಛ ನೆಮ್ಮದಿ ಇರುತ್ತದೆ. ಈ ಭೂಮಿ ಇದ್ದಾಗಿಂದಲೂ ಬದುಕಿನ ತಳಮಳ ಇದ್ದದ್ದೇ. ಆದರೆ ನಮ್ಮ ಹುಡುಕಾಟ ಸನ್ಮಾರ್ಗ, ಸತ್ಯ, ಪ್ರಾಮಾಣಿಕತೆ ಸದ್ಗಳಿಕೆ, ದಾನ,ಧರ್ಮ , ಮುಂತಾದ ಸದ್ಗುಣಗಳ ನಡುವೆ ನಮ್ಮೆಲ್ಲರ ಬದುಕು ಸಾಗಲಿ. ಕಾಡುತಲಿರುವ ಗೊಂದಲದ ಲೋಕದಲಿ
ಅಲೆಯುತಿರುವ ಮನದ ಸಾಗರದಲೀ ಉತ್ತರ ಒಂದೇ ಒಂದು ಉತ್ತಮ ಮಾರ್ಗ ಒಂದೇ. ಆಗ ನಿಮ್ಮ ನಮ್ಮೆಲ್ಲರ ಬದುಕು ಒಂದಷ್ಟು ಸಹನೀಯವೇನಿಸಬಹುದು . ಜೀವನಕ್ರಮ ಸುಧಾರಿಸಿ ಉತ್ತಮ ಕಾರ್ಯ ಗಳು ಜರುಗಬಹುದು.
ಉತ್ತಮ ಸಮಾಜದ ನಿರೀಕ್ಷೆಯಲ್ಲಿ.
ಶ್ರೀಮತಿ ಉಮಾದೇವಿ. ಯು. ತೋಟ ಗಿ.
ಸ. ಶಿ. ಸ. ಹಿ. ಪ್ರಾ. ಶಾ. ರಾಮಾಪುರ.
ತಾ. ಸವದತ್ತಿ. ಜಿ. ಬೆಳಗಾವಿ.