ನೂತನ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮಾನ್ಯ ಮಧು ಬಂಗಾರಪ್ಪ ಸಾಹೇಬರಿಗೆ ತುಂಬು ಹೃದಯದ ಅಭಿನಂದನೆಗಳು. ಸರ್ ಕಳೆದ ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ನಡೆದಿಲ್ಲ ಕೂಡಲೇ ಅರ್ಧದಲ್ಲಿಯೇ ಸ್ಥಗಿತಗೊಂಡಿರುವ ವರ್ಗಾವಣೆ ಮುಂದುವರೆಸಲು 87000 ಶಿಕ್ಷಕರು ಅರ್ಜಿ ಸಲ್ಲಿಸಿದ್ದು ಕೂಡಲೆ ಅಧಿಕಾರಿಗಳಿಗೆ ನಿರ್ದೇಶನ ನೀಡಲು ವಿನಂತಿಸುತ್ತೇನೆ.
ಶಿಕ್ಷಕರು ವಿನೂತನ ಅಭಿಯಾನವನ್ನು ಆರಂಭಿಸಿದ್ದಾರೆ.ಶಿಕ್ಷಣ ಇಲಾಖೆ ಖಾತೆಯನ್ನು ಮಧು ಬಂಗಾರಪ್ಪನವರು ವಹಿಸಿಕೊಂಡು ಒಂದು ದಿನ ಆಗಿದೆ.ಶಿಕ್ಷಕರು ಸಾಮಾಜಿಕ ಜಾಲತಾಣದಲ್ಲಿ ನಮಗೆ ವರ್ಗಾವಣೆ ಭಾಗ್ಯ ನೀಡಿ ಎಂದು ಪೊಸ್ಟರ್ ಹಾಕಿದ್ದಾರೆ. ಆದ್ರೆ ಸಚಿವರನ್ನು ನೇರವಾಗಿ ಭೇಟಿ ಮಾಡಿ ಶಿಕ್ಷಕರು ಮನವಿ ನೀಡಬಹುದು..
ಕೆಲವೇ ದಿನಗಳಲ್ಲಿ ಜಿಲ್ಲಾ ಹಾಗೂ ತಾಲೂಕ ಪಂಚಾಯತಿ ಚುನಾವಣೆ ಬರಬಹುದು ಎಂದು ಹೇಳಲಾಗುತ್ತಿದೆ.ನಂತರ ಲೋಕಸಭೆ ಚುನಾವಣೆ ಬರುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಈ ತರಹದ ಪ್ರಶ್ನೇಗಳು ಶಿಕ್ಷಕರಿಂದ ಕೇಳಿ ಬರುತ್ತಿವೆ.
ಸಚಿವ ಮಧು ಬಂಗಾರಪ್ಪನವರು ಏನು ಹೇಳುತ್ತಾರೆ ಎಂಬುದನ್ನು ಕಾದುನೋಡೊಣ..
ಬಿ.ಸಿ ನಾಗೇಶ ಅವರು ಸಚಿವರಾಗಿದ್ದಾಗ ವರ್ಗಾವಣೆಯಲ್ಲಿದ್ದ ಲೋಪದೋಶಗಳನ್ನು ಸರಿಪಡಿಸಿ ವರ್ಗಾವಣೆ ಕೌನ್ಸಲಿಂಗ್ ಆರಂಭಿಸುವಂತೆ ಮನವಿ ಮಾಡಲಾಗಿತ್ತು.ಆದ್ರೆ ಚುನಾವಣೆ ದಿನಾಂಕ ಘೋಷಣೆ ಆಗಿದ್ದರಿಂದ ವರ್ಗಾವಣೆಗೆ ಬ್ರೇಕ ಬಿದ್ದಿತ್ತು..