ಹೆಡ್‌ಪೋನ ಹಾಕಿಕೊಂಡು ಡ್ರೈವ್ ಮಾಡಿದರೆ..ಹೀಗೆ ಆಗೋದು ದೊಡ್ಡ ದುರಂತ!!!
ಅಪಘಾತ ಏನಿದು? ಘಟನೆ ನೀವೆ ನೋಡಿ..
ಲಕ್ಷ್ಮೇಶ್ವರ: ತಾಲ್ಲೂಕಿನ ಗೊಜನೂರು ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕನ ಮೇಲೆ ರೋಡ್ ರೋಲರ್ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಭಾನುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ..
ಮೃತಪಟ್ಟವರನ್ನು ಅಕ್ಕಿಗುಂದ ಗ್ರಾಮದ ಸುರೇಶ ಮಲ್ಲಪ್ಪ ಹರಿಜನ (33) ಎಂದು ಗುರುತಿಸಲಾಗಿದೆ..
ಬೆಳಿಗ್ಗೆ ಗೊಜನೂರು ಗ್ರಾಮದಲ್ಲಿ ರಸ್ತೆ ಗುತ್ತಿಗೆದಾರರು ಹಾಕಿದ್ದ ಟೆಂಟ್‌ಗೆ ಸುರೇಶ ಬಂದಿದ್ದರು. ಕೆಲಸ ಆರಂಭಕ್ಕೆ ಇನ್ನೂ ಸಮಯವಿದೆ ಎಂದು, ಟೆಂಟ್ ಬಳಿಯ ಗಿಡದ ನೆರಳಲ್ಲಿ ಮಲಗಿದ್ದರು. ಅವರು ಮಲಗಿರುವುದನ್ನು ಗಮನಿಸದ ಚಾಲಕ, ರೋಲರ್ ಅನ್ನು ಹಿಮ್ಮುಖ ವಾಗಿ ಚಲಾಯಿಸಿದ್ದು, ಸುರೇಶ ಅವರ ತಲೆಯ ಮೇಲೆಯೇ ರೋಲರ್ ಹರಿದು ಮೃತಪಟ್ಟಿದ್ದಾರೆ. ‘ಬಿಹಾರ ಮೂಲದ ರೋಲರ್ ಚಾಲಕ ಕಿವಿಗೆ ಹೆಡ್‌ಫೋನ್ ಹಾಕಿಕೊಂಡಿದ್ದ. ಹೀಗಾಗಿ ಅಲ್ಲಿಯೇ ಇದ್ದ ಕೆಲವರು ಕೂಗಿ ಹೇಳಿದರೂ ಆತನಿಗೆ ಕೇಳಿಸದೇ ದುರ್ಘಟನೆ ನಡೆದಿದೆ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಲಕ್ಷೇಶ್ವರದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ