31 ರಂದು ಸಿಹಿ ನೀಡುವ ಮೂಲಕ ಶಾಲೆಗಳು ಪುನರಾರಂಭ: ಶಿಕ್ಷಣ ಸಚಿವ ಮಧು ಬಂಗಾರಪ್ಪ
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಸೂಚನೆ…
ಬೆಂಗಳೂರ: ರಾಜ್ಯದ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆ ಮೇ 31 ರಿಂದ ಆರಂಭವಾಗಲಿದ್ದು, ಮಕ್ಕಳಿಗೆ ಸಿಹಿ ನೀಡುವ ಮೂಲಕ ಮೇ 31 ರಿಂದ ಆರಂಭವಾಗಲಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಇಲಾಖೆ ನೂತನ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.ಮಧು ಬಂಗಾರಪ್ಪ ಅವರು ಶಾಲಾ ಆರಂಭದ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ, ಶುಭಾಶಯ ತಿಳಿಸಿದ್ದಾರೆ.
ಶಾಲೆಯಲ್ಲಿ ಪೂರಕ ಸಿದ್ಧತೆಗಳು ಇಂದಿನಿಂದಲೇ ಆರಂಭಗೊಂಡಿವೆ. ಆರೋಗ್ಯಕರ ವಾತಾವರಣದಲ್ಲಿ ಖುಷಿಯ ಕಲಿಕೆ ನಿಮ್ಮದಾಗಲಿ. ಮಾದರಿ ಶಿಕ್ಷಣ ವ್ಯವಸ್ಥೆಗೆ ಶಿಕ್ಷಕರ, ಪೋಷಕರ ಹಾಗೂ ಕನ್ನಡಿಗರ ಸಹಕಾರವಿರಲಿ ಎಂದು ಮಧು ಬಂಗಾರಪ್ಪ ಫೇಸ್ಬುಕ್ ಫೋಸ್ಟ್ ಹಾಕಿದ್ದಾರೆ.
ಹೊಸ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳು ಮೇ 31 ರಿಂದ ಶಾಲೆಗೆ ಮರಳುತ್ತಿದ್ದು, ಮೊದಲ ದಿನವೇ ಸಿಹಿ ಪದಾರ್ಥದ ಜತೆಗೆ ಮದ್ಯಾಹ್ನದ ಊಟವನ್ನು ಕಡ್ಡಾಯವಾಗಿ ನೀಡುವಂತೆ ಎಲ್ಲ ಸರಕಾರಿ ಮತ್ತು ಅನುದಾನಿತ ಶಾಲಾ ಮಂಡಳಿಗಳಿಗೆ ಸೂಚನೆ ನೀಡಲಾಗಿದೆ.
ವಿದ್ಯಾರ್ಥಿಗಳು ತಮ್ಮ ಮೊದಲ ದಿನವನ್ನು ಪ್ರಾರಂಭಿಸುವ ಮೋದಲು ತರಗತಿಗಳು ಅಡುಗೆ ಪಾತ್ರೆಗಳು, ಆಹಾರ ಧಾನ್ಯಗಳು ಮತ್ತು ನೀರಿನ ಸಂಪಗಳು ಸೇರಿದಂತೆ ಆವರಣವನ್ನು ಸ್ವಚ್ಚಗೊಳಿಸಲು ಮತ್ತು ಅನಗತ್ಯ ವಸ್ರುಗಳನ್ನು ವಿಲೇವಾರಿ ಮಾಡಲು ಶಾಲೆಗಳಿಗೆ ನಿರ್ಧೇಶನ ನೀಡಲಾಗಿದೆ. ಪ್ರತಿ ತರಗತಿಗೆ ತಮ್ಮ ವೇಳಾಪಟ್ಟಿಯನ್ನು ಸಿದ್ದವಾಗಿರಸಲು ನಿರ್ವಾಹಕರನ್ನು ಕೇಳಾಗಿದೆ..