ಇಂದಿನಿಂದ ಶಾಲಾ ಪ್ರಾರಂಭೊತ್ಸವ!! ಮಕ್ಕಳಿಗೆ ಸಿಗಲಿವೆ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ…
ಬೆಂಗಳೂರ: ಬೇಸಿಗೆ ರಜೆ ಅಂತ್ಯವಾಗಿದ್ದು, ಸರ್ಕಾರದ 2023 -24 ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿಯಂತೆ ಮೇ 31 ರಿಂದ ರಾಜ್ಯದ್ಯಂತ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಪುನಾರಂಭವಾಗಲಿವೆ.ಮೇ 29 ಮತ್ತು 30 ರಂದು ಶಾಲೆಗಳನ್ನು ಸ್ವಚ್ಛಗೊಳಿಸಿ ಸುರಕ್ಷತೆ ಕ್ರಮ ಪರಿಶೀಲಿಸಿ ಸಿದ್ಧಪಡಿಸಿಕೊಂಡು ಶಾಲೆ ಪ್ರಾರಂಭೋತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.ಕೆಲವು ಖಾಸಗಿ ಶಾಲೆಗಳು ಸೋಮವಾರದಿಂದಲೇ ಆರಂಭವಾಗಲಿವೆ.
ಏಪ್ರಿಲ್ 11ರಿಂದ ಮೇ 28ರ ವರೆಗೆ ಸುಮಾರು ಎರಡು ತಿಂಗಳ ಕಾಲ ಬೇಸಿಗೆ ರಜೆ ನೀಡಲಾಗಿದ್ದು, ರಜೆ ಮುಕ್ತಾಯವಾಗಿದೆ. ತರಗತಿ ಕೊಠಡಿ, ಶಾಲೆ ಆವರಣ, ಆಟದ ಮೈದಾನ, ಲೈಬ್ರರಿ ಸೇರಿ ಇಡಿ ಶಾಲೆಯನ್ನು ಸ್ವಚ್ಛಗೊಳಿಸಿ ಮಕ್ಕಳು ಕುಳಿತುಕೊಂಡು ಪಾಠ ಕೇಳಲು ಆರೋಗ್ಯಕರ ರೀತಿಯಲ್ಲಿ ಶಾಲೆಗಳನ್ನು ಸಜ್ಜುಗೊಳಿಸಲು ಸೂಚನೆ ನೀಡಲಾಗಿದೆ.
ಶಾಲೆಯ ಶೌಚಾಲಯ, ಕಾಂಪೌಂಡ್, ಶಾಲಾ ಕೊಠಡಿ ಸೇರಿದಂತೆ ಯಾವುದೇ ಭಾಗ ಮಳೆ ಇತರೆ ಕಾರಣಗಳಿಂದ ಹಾನಿಯಾಗಿದ್ದರೆ ಅವುಗಳ ದುರಸ್ತಿಗೆ ಕ್ರಮ ವಹಿಸಿ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಹೇಳಲಾಗಿದೆ.
ಈಗಾಗಲೇ ಶಾಲೆಗಳಿಗೆ ಶೇಕಡ 95 ರಷ್ಟು ಪಠ್ಯಪುಸ್ತಕ, ಸಮಾವಸ್ತ್ರ ಪೂರೈಕೆಯಾಗಿದೆ. ಶಾಲೆ ಆರಂಭದ ಮೊದಲ ದಿನವೇ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ನೀಡಲು ಕ್ರಮ ಕೈಗೊಳ್ಳಲಾಗಿದೆ.
ಶಾಲೆ ಆರಂಭದ ದಿನ ತಳಿರು ತೋರಣಗಳಿಂದ ಶಾಲೆಯನ್ನು ಸಿಂಗರಿಸಿ ಮಕ್ಕಳಿಗೆ ಸಿಹಿ, ಗುಲಾಬಿ ನೀಡಿ ಶಾಲೆಗೆ ಬರಮಾಡಿಕೊಳ್ಳಲಾಗುವುದು. ಬಿಸಿಯುಟದಲ್ಲಿ ಒಂದು ಸಿಹಿ ತಿನಿಸು ತಯಾರಿಸಿ ಮಕ್ಕಳಿಗೆ ಬಡಿಸಲಾಗುವುದು.
ಧಾರವಾಡ ಡಿಡಿಪಿಐ ಕೆಳದಿಮಠ ಅವರು ಮಾತನಾಡಿ, ಧಾರವಾಡ ಜಿಲ್ಲೆಯಾದ್ಯಂತ ಪಠ್ಯಪುಸ್ತಕ ಹಾಗೂ ಸಮಸವಸ್ತ್ತಗಳನ್ನು ಪೂರೈಕೆಮಾಡಲಾಗಿದೆ.ಜಿಲ್ಲೆಯ ಕಲಘಟಗಿ ಹಾಗೂ ಕುಂದಗೋಳ ತಾಲೂಕಿನ ಶಾಲೆಗಳಿಗೆ ಸಮಸವಸ್ತ್ರಗಳು ಪೂರೈಕೆಯಾಗಿಲ್ಲ,ಎರಡು ಮೂರು ದಿನಗಳಲ್ಲಿ ಆ ಶಾಲೆಗಳಿಗೂ ಕೂಡ ಸಮವಸ್ತ್ರಗಳನ್ನು ಪೂರೈಸಲಾಗುವುದೆಂದರು..
ಸಾರ್ವಜನಿಕ ಶಿಕ್ಷಣ ಇಲಾಖೆ ಕಳೆದ ವರ್ಷ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ಪೂರೈಕೆಯಲ್ಲಿ ವಿಳಂಬ ಮಾಡಿತ್ತು.ಮಕ್ಕಳ ಪೋಷಕರಿಂದ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು..ಆದ್ರೆ ಈ ವರ್ಷ ಎಲ್ಲ ತಪ್ಪುಗಳನ್ನು ಸರಿಪಡಿಸಿಕೊಂಡು ಶಾಲಾ ಪ್ರಾರಾಂಭೋತ್ಸವಕ್ಕೆ ಸಕಲ ರೀತಿಯಲ್ಲಿ ಸಜ್ಜಾಗಿದೆ