ನಿನ್ನ ಚಲುವ ವದನ
ನನ್ನ ಹೃದಯ ಸಾಮ್ರಾಜ್ಯದ ಸೌಂದರ್ಯ ನೀ
ಭುವಿಯಲರಳಿದ ಅಪ್ಸರೆ
ನಿನ್ನ ಅಧರ ಸಿಹಿಯ ಸವಿಯುವ ರಸಿಕ ನಾ
ಮೋಡ ರಹಿತ ಹವಾಮಾನ ದೊಳು ಶೋಭಿಸುತಿರುವ ಮಂದಾರ ಪುಷ್ಪ ನೀ
ನೀರವ ಆಕಾಶದ ರಾತ್ರಿ ಬೆಳ್ಳಿಚುಕ್ಕಿಯಾಗಿ ಕಂಗೊಳಿಸುವ
ನಿನ್ನ ಕಂಡ ಈ ಮನ ಸೋತು ಶಯ್ಯಾಗೃಹದಲಿ ಒಮ್ಮೆ ನಿನ್ನ ಸೇರುವಾಸೆಯಾಗಿ ಶರಣಾಗಿ ಕವಿ ಮನಸ್ಸಿನಲ್ಲಿ ಸೃಜನಶೀಲತೆ ಮತ್ತು ಕಲ್ಪನೆಯಿಂದ ತುಂಬಿಹೋಗಿದೆ,
ಎಷ್ಟು ಕವನ ಗೀಚಿದರೂ ಮುಗಿಯದ ಸೌಂದರ್ಯ ರಾಶಿ
ಸರಸದಲಿ ಸೇರಲು ಕಾತರಿಸುವ ಮನ ಶಯನದಲಿ ಮೀಯಲು
ಕಾಯುತಲಿ ವಿಹರದುರಿಯಲಿ ಬೆಂದಿಹದು
ಬಾ ಬೇಗ ಆವರಿಸು ಈ ಹೃದಯವ ನಿನ್ನ ಬೆಚ್ಚಗಿನ ತೋಳ ಬಳಸಿ
ನಿನ್ನ ಕಣ್ಣೋಟವೇ ಹಾಗೆ ನೋಡುತಿರೆ
ಬಳಿ ಬರುವಾಸೆ ಕಣ್ಣಿನೊಳು ನನ್ನ ಕರೆವಂತೆ
ನೋಡುತಿರೆ ಎಲ್ಲಾ ಮರೆತು ನಿನ್ನ ಬಳಿ ಬಂದು
ಶರಣಾಗಿ ನಿಂತು ನಿನ್ನ ತೋಳಲಿ ಬಂಧಿಯಾಗಿ
ನನ್ನೆಲ್ಲ ನೋವುಗಳ ಮರೆತು ಮಲಗುವಾಸೆ
ಎಷ್ಟು ಕಾಡುತಿಹೆ ನನ್ನ ನೋಡಿ ನೋಡಿ ಕರೆಯುವ ನಿನ್ನ ನೋಟ
ಮಾತು ಮಾತಿನಲಿ ರಸಿಕತೆ ನೀಡುವ ನಿನ್ನ ಮಾತು
ಮರೆಯದಂತಾಗಿ ಹೋಗಿ ಮೈಮರೆತು ಸೋಲುವೆ
ಬೆಚ್ಚಗಿನ ಮೈ ಬಿಸಿ ಅಪ್ಪುಗೆಯ ಸ್ಪರ್ಶ ಬಿಡದಂತಾಗಿ
ಕಳೆದು ಹೋಗಿರುವೆ ನಿನ್ನ ಮಡಿಲಲಿ
ದೇವರೇ ಸದಾ ಹೀಗೆ ಇಡು ನಮ್ಮ ಬಾಂಧವ್ಯ
ನಾ ಬೇರೆ ಯಾವ ವರವ ಬೇಡೆನು ನಿನ್ನಲಿ
ವೈ. ಬಿ. ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ
ಸಿಂದೋಗಿ ಕ್ರಾಸ್
ಮುನವಳ್ಳಿ-೫೯೧೧೧೭
ಸವದತ್ತಿ ತಾಲೂಕು
ಬೆಳಗಾವಿ ಜಿಲ್ಲೆ
9449518400
8971117442