“ಸಾವಿತ್ರಿಬಾಯಿ ಫುಲೆ” ಚಲನಚಿತ್ರ ಕ್ಕೆ ಮತ್ತೊಂದು ಪ್ರಶಸ್ತಿಯ ಗರಿ. UFMC GOA International film festival- 2023…
ಯೂನಿವರ್ಸಲ್ ಪಿಲ್ಮ್ ಮೇಕರ್ಸ್ ಕೌನ್ಸಿಲ್ ಹಾಗೂ ನವ ಕರ್ನಾಟಕ ಫಿಲ್ಮ್ ಅಕಾಡೆಮಿ ಯವರು ಇತ್ತೀಚೆಗೆ ಆಯೋಜಿಸಿದ್ದ
UFMC GOA International film festival- 2023 ಕಾರ್ಯಕ್ರಮವು ಮೇ 20&21 2023 ರಂದು ಗೋವಾ ದ ಪಣಜಿಯಲ್ಲಿ ಅದ್ದೂರಿಯಾಗಿ ಜರುಗಿದೆ.
ಈ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಕರ್ನಾಟಕದ ಸಾಮಾಜಿಕ ಚಲನ ಚಿತ್ರವಾದ “ಸಾವಿತ್ರಿ ಬಾಯಿ ಫುಲೆ” ಚಲನಚಿತ್ರಕ್ಕೂ ಪ್ರಶಸ್ತಿ ಲಭಿಸಿದ್ದು ಸಂತೋಷಕರ ಸಂಗತಿಯಾಗಿದೆ.
ಸಾವಿತ್ರಿಬಾಯಿ ಪುಲೆ ಚಲನಚಿತ್ರದ ಹೆಸರಾಂತ ನಿರ್ಮಾಕರಾದ ಶ್ರೀ ಬಸವರಾಜ ಬೂತಾಳಿ ರವರು ಹಾಗೂ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್ ಮುಳ್ಳೂರ ರವರುಗಳನ್ನು ಸಹಾ ಆಹ್ವಾನಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಅತಿಥಿ ಗಣ್ಯರಾದ
1. Subash Phal Dessai
Minister for Social Welfare, Archives & Archaeology River & Navigation
2. Uday Madikar
Former Mayor of Goa
3. Anu Prabhakar Mukherji
Actress – Sandalwood
4. Anita Thorat
South Goa District President of Goa Panchayat Mahila
5. Gurdip Singh
Publisher/Editor – 7Clicks Media, Singapore
6. Suggala Yalmali
District Governor – Lions International – District 317B
7. Debasish Maitra
C E O – Dreams Event – New Delhi
8. Rajesh Raja
Director – Film Distributor
9. Jayaprabhu Lingayath
Actor/Producer & CEO Jai Entertainment World, Mumbai ರವರುಗಳೆಲ್ಲರೂ ಭಾಗವಹಿಸಿದ್ದರು.
ಅಂತರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟ ಕರ್ನಾಟಕದ ಕನ್ನಡ ಚಲನಚಿತ್ರ ಸಾವಿತ್ರಿಬಾಯಿ ಫುಲೆ ಚಲನ ಚಿತ್ರದ ನಿರ್ಮಾಪಕರಾದ ಶ್ರೀ ಬಸವರಾಜ ಬೂತಾಳಿ ರವರು, ಡಾ.ಲತಾ.ಎಸ್.ಮುಳ್ಳೂರ ಹಾಗೂ ಡಾ.M. A. ಮುಮ್ಮಿಗಟ್ಟಿ president UFMC &NKFA ಅವರ ಸಮ್ಮುಖದಲ್ಲಿ ಮಾನ್ಯ ಶ್ರೀ ಸುಭಾಶ ಉತ್ತಮ ಪಾಲ್ ದೇಸಾಯಿ. ಮಾನ್ಯ ಸಚಿವರು ಗೋವಾ (Social Welfare , River Navigation, Archives And Archeology in Government of Goa) ಹಾಗೂ ಪ್ರಸಿದ್ಧ ಚಲನಚಿತ್ರ ತಾರೆಯಾದ ಅನು ಪ್ರಭಾಕರ್ ಮುಖರ್ಜಿ ರವರಿಂದ ಪ್ರಶಸ್ತಿ ಸ್ವೀಕರಿಸಿದರು..
ಡಾ.ಲತಾ.ಎಸ್.ಮುಳ್ಳೂರ ರವರು ಈ ಕಾರ್ಯಕ್ರಮ ಕುರಿತು ಪ್ರಸಿದ್ಧ ಸಾಹಿತಿಗಳು ಪತ್ರಕರ್ತರು ಆದ ಡಾ.ಸರಜೂ ಕಾಟ್ಕರ್ ಅವರ ಕಾದಂಬರಿ ಆಧಾರಿತ. ರಾಜ್ಯ ಪ್ರಶಸ್ತಿ ವಿಜೇತರಾದ ಶ್ರೀ ವಿಶಾಲರಾಜ ಅವರ ನಿರ್ದೇಶನದ ಲ್ಲಿ ಮಾತೆ” ಸಾವಿತ್ರಿ ಬಾಯಿ ಫುಲೆ” ಜೀವನಾಧಾರಿತ ಚಲನಚಿತ್ರವು ಈಗಾಗಲೇ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು
ಇಂದು ಇದಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ ಕೂಡ ಲಬಿಸಿರುವುದು ಸಂತೋಷಕರವಾಗಿದೆ.ಇಂದಿನ ಕಾರ್ಯಕ್ರಮವೂ ಅವಿಸ್ಮರಣೀಯವಾದದ್ದು ಎಂದಿದ್ದಾರೆ.ಈ ಸಿನಿಮಾ ನಿರ್ಮಿಸಿದ ಶ್ರೀ ಬಸವರಾಜ ಭೂತಾಳಿ ಅವರಿಗೆ ಹಾಗೂ ಚಲನಚಿತ್ರ ತಂಡದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಶ್ರೀ ಅಮೋಘ ಕ್ರಿಯೇಷನ್ಸ್ ಹಾಗೂ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ ವತಿಯಿಂದ ರಾಜ್ಯಾದ್ಯಂತ ಚಲನಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿದ್ದು ರಾಷ್ಟ್ರಪ್ರಶಸ್ತಿ ವಿಜೇತ ತಾರಾ ಅನುರಾಧ ಅವರು ಮಾತೆ ಸಾವಿತ್ರಿಬಾಯಿ ಪುಲೆ ಅವರ ಪಾತ್ರದಲ್ಲಿ ಅಮೋಘವಾಗಿ ನಡೆಸಿದ್ದಾರೆ. ಸುಚೇಂದ್ರ ಪ್ರಸಾದ್ ಅವರು ಜ್ಯೋತಿಬಾಪುಲೆ ಪಾತ್ರದಲ್ಲಿ ನಡೆಸಿದ್ದಾರೆ ಬ್ರಿಟಿಷರ ಕಾಲದಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ಅವರು ಮಹಿಳೆಯರ ಶಿಕ್ಷಣ ಕ್ಕಾಗಿ ಮಹಿಳೆಯರಿಗೆ ಮಾರಕವಾಗಿರುವ ಮೂಡ ನಂಬಿಕೆಗಳ ವಿರುದ್ಧ ಹೋರಾಟ . ಪ್ರತಿಯೊಬ್ಬರು ನೋಡಲೇಬೇಕಾದ ಚಲನಚಿತ್ರವಾಗಿದ್ದು. ಈಗ ಮತ್ತೊಂದು ಪ್ರಶಸ್ತಿಯ ಗರಿ ಬಂದಿದ್ದು ನಮಗೆ ಸಂತೋಷವಾಗಿದೆ ಎಂದು ತಿಳಿಸಿದರು.