ಧಾರವಾಡದಲ್ಲಿ ಗಾಣಿಗ ಸಮಾಜದ ಪ್ರತಿಭೆಗಳಿಗೆ, ಪ್ರತಿಭಾ ಪುರಸ್ಕಾರ..
ಧಾರವಾಡ, ಮೇ ೨೪,
ಧಾರವಾಡದ ಆಲೂರ ವೆಂಕಟರಾವ್ ಸಭಾಭವನದಲ್ಲಿ, ಮೇ 26 ರಂದು ಶುಕ್ರವಾರ, ಬೆಳಿಗ್ಗೆ 10,30 ಗಂಟೆಗೆ, ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾ ರಾಜ್ಯ ಘಟಕ ಬೆಂಗಳೂರು, ಜಿಲ್ಲಾ ಘಟಕ ಧಾರವಾಡ ಹಾಗೂ ಗಾಣಿಗ ಜ್ಯೋತಿ ಮಾಸಪತ್ರಿಕೆಯ ಸಹಯೋಗದೊಂದಿಗೆ, ಗಾಣಿಗ ಸಮಾಜದ 2022-23 ನೇಯ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ, ಹೆಚ್ಚು ಅಂಕಗಳಿಸಿ, ತೇರ್ಗಡೆಯಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು, ಆಯೋಜಿಸಲಾಗಿದೆ ಎಂದು ಗಾಣಿಗ ಜ್ಯೋತಿ ಮಾಸಪತ್ರಿಕೆಯ ಸಂಪಾದಕರಾದ ಚಂದ್ರಶೇಖರ ಮಾಡಲಗೇರಿ ತಿಳಿಸಿದರು,
ಅವರು ಧಾರವಾಡದ ರಂಗಾಯಣ ಆವರಣದಲ್ಲಿ ಇರುವ ಜರ್ನಲಿಸ್ಟ ಗಿಲ್ಡನಲ್ಲಿ, ಮಾದ್ಯಮಘೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು,
ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾದ ಧಾರವಾಡ ಜಿಲ್ಲಾ ಅದ್ಯಕ್ಷರಾದ ಮಲ್ಲಪ್ಪ ಹೊಸಕೇರಿ ಅವರ ಅಧ್ಯಕ್ಷತೆಯಲ್ಲಿ ಜರುಗಲಿರುವ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಿಜಯಪುರ ಜಿಲ್ಲೆಯ ಕೊಲ್ಹಾರದ ಶ್ರೀ ದಿಗಂಬರೇಶ್ವರ ಸಂಸ್ಥಾನಮಠದ ಯೋಗಿ ಶ್ರೀ ಕಲ್ಲಿನಾಥ ಮಹಾಸ್ವಾಮಿಗಳು ವಹಿಸುವರು, ಧಾರವಾಡದ ವೈಷುದೀಪ ಪೌಂಡೇಶನನ ಕಾರ್ಯಾದ್ಯಕ್ಷರಾದ ಶಿವಲೀಲಾ ವಿನಯ ಕುಲಕರ್ಣಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಭಾ ನಾಯಕರಾದ. ತಿಪ್ಪಣ್ಣ ಮಜ್ಜಗಿ, ಸಮಾಜದ ಹಿರಿಯರಾದ ಹುಬ್ಬಳ್ಳಿಯ ಜಿ ಎಸ್ ಛಬ್ಬಿ, ಅಖಿಲ ಭಾರತ ಗಾಣಿಗ ಸಂಘದ ರಾಜ್ಯಾದ್ಯಕ್ಷರಾದ ಗುರಣ್ಣ ಗೋಡಿ, ರಾಜ್ಯ ಗಾಣಿಗ ನೌಕರರ ಸಂಘದ ರಾಜ್ಯ ಗೌರವಾದ್ಯಕ್ಷರಾದ ಆರ್ ಜಿ ಪಾಟೀಲ, ಕರ್ನಾಟಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ, ಭಾರತಿ ಗಾಣಿಗೇರ, ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾದ ರಾಜ್ಯಾದ್ಯಕ್ಷರಾದ ಆನಂದ ಕೆ ಮಂಡ್ಯ, ರಾಜ್ಯ ಕಾರ್ಯಾದ್ಯಕ್ಷರಾದ ಪರಶುರಾಮ ಗಡದಿನ್ನಿ, ರಾಜ್ಯ ಸಹಕಾರ್ಯದರ್ಶಿ ಪ್ರಮಿಳಾಮೂರ್ತಿ ಧಾರವಾಡದ ಗಾಣಿಗ ಸಂಘದ ತಾಲ್ಲೂಕು ಅದ್ಯಕ್ಷರಾದ ಮಲ್ಲೇಶಪ್ಪ ಗಾಣಿಗೇರ, ನ್ಯಾಯವಾದಿ ಗುರುಪುತ್ರಪ್ಪ ಶಿರೋಳ, ಹಿರಿಯರಾದ ಬಸವರಾಜ ಭಾವಿಕಟ್ಟಿ, ಅಶೋಕ ಮಜ್ಜಿಗುಡ್ಡ, ರಾಯಪ್ರಮಿಳಾಮೂರ್ತಿ, ಹುಬ್ಬಳ್ಳಿಯ ಪ್ರೌಢಶಾಲಾ ಶಿಕ್ಷಕರ ಸಂಘಟನೆಯ ಪ್ರಮುಖ ನಾಯಕರಾದ ಶ್ರೀಶೈಲ ಗಡದಿನ್ನಿ, ಮಹಿಳಾ ಗಾಣಿಗ ಸಂಘದ ರಾಜ್ಯ ನಾಯಕಿಯರಾದ ಶಕುಂತಲಾ ತೇಲಿ, ವಿದ್ಯಾ ಭಾವಿ, ಶೋಭಾ ಗಾಣಿಗೇರ, ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಕೆ ಬಿ ಕುರಹಟ್ಟಿ, ರಾಜ್ಯ ಖಜಾಂಚಿ ಕೆ ಎಂ ಗೆದಗೇರಿ, ಧಾರವಾಡ ಜಿಲ್ಲೆಯ ಗಾಣಿಗ ನೌಕರರ ಸಂಘದ ಜಿಲ್ಲಾ ಅದ್ಯಕ್ಷರಾದ ಅಶೋಕ ನಾಗಸಮುದ್ರ ಬಿ ಜಿ ಬಶೆಟ್ಟಿ, ಜಯರಾಜ ಗೋಳಸಂಗಿ, ಧಾರವಾಡದ ವಿವೇಕಾನಂದ ಗುರುಕುಲದ ಚಂದ್ರಶೇಖರ ಕುಂದಗೋಳ ತಾಲೂಕಿನ ಗಾಣಿಗ ಸಂಘದ ಹಿರಿಯರಾದ ನಿಂಗಪ್ಪ ನಡುವಿನಹಳ್ಳಿ, ಹೆಬ್ಬಳ್ಳಿಯ ಗಾಣಿಗ ಸಮಾಜದ ಯುವನಾಯಕ ಶ್ರೀಶೈಲ ಲಕ್ಕಮ್ಮನವರ ಸೇರಿದಂತೆ ಧಾರವಾಡ ಜಿಲ್ಲೆಯ ಗಾಣಿಗ ಸಮಾಜದ ಎಲ್ಲ ಹಿರಿಯರು ಈ ಕಾರ್ಯಕ್ರಮಕ್ಕೆ ಆಗಮಿಸುವರು ಎಂದು ಚಂದ್ರಶೇಖರ ಮಾಡಲಗೇರಿ ತಿಳಿಸಿದರು, ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾದ ಧಾರವಾಡ ಜಿಲ್ಲಾ ಉಪಾಧ್ಯಕ್ಷೆ ಪೂರ್ಣಿಮಾ ನಿಚ್ಚಾಳ ಮಾತನಾಡಿ, ಇದು ಧಾರವಾಡ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಸಮಾಜದ ಜನರು ಬರಬೇಕು, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 95% ಕ್ಕಿಂತ ಹೆಚ್ಚು ಅಂಕಗಳಿಸಿ, ತೇರ್ಗಡೆಯಾದ ಮಕ್ಕಳ ಮಾಹಿತಿಯನ್ನು ಗುರುವಾರ ಬೆಳಿಗ್ಗೆ 10 ಗಂಟೆಯ ಒಳಗಾಗಿ ಮಾಹಿತಿ ಕೊಡಲು ತಿಳಿಸಿದರು, ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾದ ಧಾರವಾಡ ಜಿಲ್ಲಾ ಅದ್ಯಕ್ಷರಾದ ಮಲ್ಲಪ್ಪ ಹೊಸಕೇರಿ, ಜಿಲ್ಲಾ ಉಪಾಧ್ಯಕ್ಷರಾದ
ಪೂರ್ಣಿಮಾ ನಿಚ್ಚಾಳ, ಬಾಬು ಸಿರಸಂಗಿ, ಗಂಗಪ್ಪ ಫ ಗಾಣಿಗೇರ,ಪ್ರಕಾಶ ಬಸಪ್ಪ ಹೊಸಕೇರಿ ಮಾದ್ಯಮ ಗೋಷ್ಠಿಯಲ್ಲಿ ಇದ್ದರು.