ರೇಖಾಚಿತ್ರದ ಚಿತ್ರಕಲಾ ಶಿಕ್ಷಕಿ ರೇಖಾ ಮೊರಬ..
ಚಿತ್ರಕಲೆ ಎಂಬುದು ವರ್ಣಗಳನ್ನು ಬಳಸಿ, ಕಾಗದ ಅಥವಾ ಕ್ಯಾನ್ವಾಸಿನ ಮೇಲೆ ಮಾನವಜೀವಿ ಮೂರ್ತ ಅಥವಾ ಅಮೂರ್ತ ದೃಶ್ಯವನ್ನು ’ಅರ್ಥವತ್ತಾಗಿ ಮೂಡಿಸುವ ಕಲೆಯಾಗಿದೆ.
ಅದರಲ್ಲೂ ರೇಖಾಚಿತ್ರವು ರೂಪಗಳು, ಆಕಾರಗಳು ಅಥವಾ ಚಿತ್ರಗಳನ್ನು ರಚಿಸಲು ಮೇಲ್ಮೈಯಲ್ಲಿ ಗುರುತುಗಳನ್ನು ಮಾಡುವ ಕ್ರಿಯೆಯಾಗಿದೆ. ಇದು ಕಲಾತ್ಮಕ ಅಭಿವ್ಯಕ್ತಿ ವಿಧಾನವಾಗಿದ್ದು, ಸೃಷ್ಟಿಕರ್ತರು ಅವರು ಜಗತ್ತನ್ನು ಹೇಗೆ ವೀಕ್ಷಿಸುತ್ತಾರೆ ಅಥವಾ ಅದರ ವಿಭಿನ್ನ ಅಂಶಗಳನ್ನು ಹೇಗೆ ಅರ್ಥೈಸುತ್ತಾರೆ ಎಂಬುದನ್ನು ತೋರಿಸಲು ಅನುವು ಮಾಡಿಕೊಡುತ್ತದೆ. ರೇಖಾಚಿತ್ರಗಳು ಅಥವಾ ರೇಖಾಚಿತ್ರದ ಚಟುವಟಿಕೆಯ ಉತ್ಪನ್ನವು ವಿಷಯ, ಬಳಸಿದ ಉಪಕರಣಗಳು, ಮಧ್ಯಮ ಮತ್ತು ಯೋಜನೆಯ ಉದ್ದೇಶವನ್ನು ಆಧರಿಸಿ ಬದಲಾಗಬಹುದು. ರೇಖಾಚಿತ್ರವು ದೃಶ್ಯ ಕಲೆಯ ಒಂದು ರೂಪವಾಗಿದೆ, ಇದರಲ್ಲಿ ಕಲಾವಿದನು ಕಾಗದ ಅಥವಾ ಇತರ ಎರಡು ಆಯಾಮದ ಮೇಲ್ಮೈಯನ್ನು ಗುರುತಿಸಲು ಉಪಕರಣಗಳನ್ನು ಬಳಸುತ್ತಾನೆ. ಡ್ರಾಯಿಂಗ್ ಉಪಕರಣಗಳಲ್ಲಿ ಗ್ರಾಂಪೈಟ್ ಪೆನ್ಸಿಲ್ಗಳು, ಪೆನ್ ಮತ್ತು ಶಾಯಿ, ವಿವಿಧ ರೀತಿಯ ಬಣ್ಣಗಳು, ಶಾಯಿಯ ಕುಂಚಗಳು, ಬಣ್ಣದ ಪೆನ್ಸಿಲ್ಗಳು, ಕ್ರಯೋನ್ಗಳು, ಇದ್ದಿಲು, ಸೀಮೆಸುಣ್ಣ, ನೀಲಿಬಣ್ಣಗಳು, ಎರೇಸರ್ಗಳು, ಮಾರ್ಕರ್ಗಳು, ಸ್ಟೈಲಸ್ಗಳು ಮತ್ತು ಲೋಹಗಳು (ಸಿಲ್ವರ್ಪಾಯಿಂಟ್ನಂತಹವು) ಸೇರಿವೆ. ಡಿಜಿಟಲ್ ಡ್ರಾಯಿಂಗ್ ಎನ್ನುವುದು ಕಂಪ್ಯೂಟರ್ನಲ್ಲಿ ಗ್ರಾಫಿಕ್ಸ್ ಸಾಫ್ಟ್ವೇರ್ನಲ್ಲಿ ಚಿತ್ರಿಸುವ ಕ್ರಿಯೆಯಾಗಿದೆ.
ಡಿಜಿಟಲ್ ಡ್ರಾಯಿಂಗ್ನ ಸಾಮಾನ್ಯ ವಿಧಾನಗಳು ಟಚ್ಸ್ಕ್ರೀನ್ ಸಾಧನದಲ್ಲಿ ಸ್ಟೈಲಸ್ ಅಥವಾ ಬೆರಳು, ಸ್ಟೈಲಸ್- ಅಥವಾ ಫಿಂಗರ್-ಟು-ಟಚ್ಪ್ಯಾಡ್, ಅಥವಾ ಕೆಲವು ಸಂದರ್ಭಗಳಲ್ಲಿ, ಮೌಸ್. ಅನೇಕ ಡಿಜಿಟಲ್ ಕಲಾ ಕಾರ್ಯಕ್ರಮಗಳು ಮತ್ತು ಸಾಧನಗಳಿವೆ.
ಅನುಕರಣೆ ಚಿತ್ರ ವೀಕ್ಷಣ ಚಿತ್ರ ಚಿಂತನ ಚಿತ್ರ, ನೈಸರ್ಗಿಕ ವಸ್ತುಗಳು, ನಿತ್ಯೋಪಯೋಗಿ ವಸ್ತುಗಳು, ವಿವಿಧ ವಿನ್ಯಾಸಗಳನ್ನು ನೋಡಿ ಬರೆಯುವುದು. ಕೃತಿ ರಚನಾ ಸಮಯದಲ್ಲಿ ಬಯಸಿದ ವಿಷಯ, ರಚನಾ ವಿಧಾನ, ಬಳಸಿದ ತಾಂತ್ರಿಕತೆ, ಅಚ್ಚುಕಟ್ಟುತನ, ಬಣ್ಣ ಲೇಪನ ಮತ್ತು ಸಂಯೋಜನೆ ಇತ್ಯಾದಿ ಅಪೇಕ್ಷಣೀಯ.
ಹಿಂದಿನ ದಿನಗಳಲ್ಲಿ, ರಾಜ ಮಹಾರಾಜರು ತಮ್ಮ ಪುತ್ರರು ಅಥವಾ ಪುತ್ರಿಯರ ಭಾವಚಿತ್ರಗಳನ್ನು ಇತರ ರಾಜ ರಾಜವಂಶಗಳ ನಡುವೆ ಕಳಿಸಿಕೊಡುವ ಮೂಲಕ ಸೂಕ್ತವಾದ ಮೈತ್ರಿಯನ್ನು ಹುಡುಕುತ್ತಿದ್ದರು.
ಪ್ರಾಚೀನ ಕಾಲದ ಜನಜೀವನದ ಸಂಶೋಧನೆಗೆ ಸಹ ಚಿತ್ರಕಲೆ ಪೂರಕವಾಗಿದೆ.ಹೀಗೆ ಚಿತ್ರಕಲೆ ಮೂಲಕ ಶಿಕ್ಷಕಿ ರೇಖಾ ಮೊರಬ ತಮ್ಮ ಶೈಲಿಯ ಮೂಲಕ ಗುರುತಿಸಿಕೊಂಡಿರುವರು.ನನ್ನ ಅಭಿಪ್ರೇರಣೆ ಸಂಪಾದಿಸಿ ಕೃತಿಯಲ್ಲಿ ಪ್ರಕಟಿಸಲು ನನಗೆ ಲಕ್ಕಮ್ಮನವರ ಗುರುಗಳು ಹಲವಾರು ಶಿಕ್ಷಕ ಶಿಕ್ಷಕಿಯರ ಚಟುವಟಿಕೆಗಳನ್ನು ಕಳಿಸಿದ್ದರು. ಕಾರಣಾಂತರಗಳಿಂದ ರೇಖಾ ಮತ್ತು ನಂದಿನಿ ಸನಬಾಳ್ ಅವರ ಚಟುವಟಿಕೆಗಳನ್ನು ಬಳಕೆ ಮಾಡಲು ನನಗೆ ಆಗಲಿಲ್ಲ.ನಂತರ ರೇಖಾ ಮೊರಬ ತಾವು ಚಟುವಟಿಕೆಗಳನ್ನು ಕಳಿಸಿದರು. ಗುರು ಮಾತೆ ತಮ್ಮದೇ ವೈಶಿಷ್ಟ್ಯವನ್ನು ಹೊಂದಿದ ಶಿಕ್ಷಕಿ ಎಂಬುದು ಅವರು ವ್ಯಾಟ್ಸಪ್ ನಲ್ಲಿ ಕಳಿಸಿದ ರೇಖಾ ಚಿತ್ರಗಳ ಮೂಲಕ ತಿಳಿಯಿತು.
ಇತ್ತೀಚಿನ ನನ್ನ ಬಹುತೇಕ ಬರಹ ಹಾಗೂ ಕವನಗಳನ್ನು ಅವರಿಗೆ ಕಳಿಸಿ ಚಿತ್ರ ತಗೆದು ಕೊಡಲು ಕೇಳಿದಾಗ ಒಳ್ಳೆಯ ರೇಖಾ ಚಿತ್ರ ಕಳಿಸತೊಡಗಿದರು ಅಂತರ್ಜಾಲ ತಾಣದಲ್ಲಿ ಇವರ ಚಿತ್ರ ಗಳು ಪ್ರಕಟವಾದಂತೆ ಮತ್ತೆ ನನ್ನ ಪರಿಚಿತರ ಬರಹಗಳಿಗೂ ಇವರ ರೇಖಾಚಿತ್ರಗಳನ್ನು ಬಳಸಿಕೊಂಡು ಪ್ರಕಟಣೆಗೆ ಪ್ರಯತ್ನಿಸಿದೆ.ನಾಳೆ ಬುಧವಾರ ಇವರ ಜನ್ಮದಿನ ತನ್ನಿಮಿತ್ತ ಇವರ ಪರಿಚಯಾತ್ಮಕ ಬರಹ ರೂಪಿಸಬೇಕೆನಿಸಿತು. ಹೀಗಾಗಿ ಅವರನ್ನು ಸಂಪರ್ಕಿಸಿ ಅವರ ಚಿತ್ರಕಲೆ ಬೆಳವಣಿಗೆಯ ಹಾದಿಯೊಂದಿಗೆ ಅವರ ಪರಿಚಯಾತ್ಮಕ ಮಾಹಿತಿಯನ್ನು ಈ ಬರಹದಲ್ಲಿ ರೂಪಿಸಿರುವೆನು. ಸೃಜನಶೀಲ ಶಿಕ್ಷಕಿಯ ಕುರಿತು ಈ ಬರಹ.
ಬಾಲ್ಯ ಮತ್ತು ಶಿಕ್ಷಣ
ರೇಖಾ.ವಾಯ್. ಮೊರಬ, ಇವರು ದಿನಾಂಕ ೨೪.೦೫.೧೯೭೪ ರಂದು ಹುಬ್ಬಳ್ಳಿಯಲ್ಲಿ ಜನಿಸಿದರು.
ತಂದೆ: ಯಲ್ಲಪ್ಪ ನಿಂಗಪ್ಪ ಮೊರಬ್ ತಾಯಿ: ಸರೋಜಾ.ವಾಯ್. ಮೊರಬ.ಈ ದಂಪತಿಗಳ ೭ ಮಕ್ಕಳಲ್ಲಿ ಇವರು ಮೂರನೇಯವರು.ಓರ್ವ ಸಹೋದರ ಓರ್ವ ಸಹೋದರಿ ಇವರಿಗಿಂತ ಹಿರಿಯರು. ಮೂರು ಜನ ಗಂಡು ಮಕ್ಕಳು ನಾಲ್ಕು ಜನ ಹೆಣ್ಣು ಮಕ್ಕಳ ದೊಡ್ಡ ಕುಟುಂಬ ಇವರದು. ಇವರ ಪ್ರಾಥಮಿಕ ಶಿಕ್ಷಣ ರೈಲ್ವೆ ಸ್ಕೂಲ್, ಹುಬ್ಬಳ್ಳಿ ೧ & ೭ ಭಾಷಣ ಮಿಷನ್ ಪ್ರೌಢಶಾಲೆ, ಹುಬ್ಬಳ್ಳಿ, ೮ ರಿಂದ ೧೦ನೇ ತರಗತಿಯವರೆಗೆ ಓದಿ ನಂತರ
ಸರ್ಕಾರಿ ಕಾಲೇಜು, ಗೋಪನಕೊಪ್ಪ (J.O.C) ದಲ್ಲಿ ವ್ಯಾಸಂಗ ಮಾಡಿದರು, ಸರಕಾರಿ ಆರ್ಟ್ ಕಾಲೇಜ್ ಧಾರವಾಡ (D.M.C) ಮುಗಿಸಿದರು ಕಂಕಣ ಬಲ ಕೂಡಿ ಬಂದು ೦೪.೦೭.೧೯೯೫ ಮದುವೆ ಆಯಿತು. ಗಂಡನ ಹೆಸರು ನಾಗೇಂದ್ರ. ಪಿ. ದೊಡವಾಡ ಉದ್ಯೋಗ: ಸಣ್ಣ ಕೈಗಾರಿಕೆ ಗೋಕುಲ್ ರೋಡ್ ಹುಬ್ಬಳ್ಳಿ. ಬದುಕಿನ ಬಂಡಿ ಸಂಸಾರದ ಜೀವನದಲ್ಲಿ ಸಾಗತೊಡಗಿತು.ಇವರ ತಂದೆಯವರು ಬಿಎಸ್ಏನ್ಎಲ್ ಸಿವಿಲ್ ಡಿಪಾರ್ಟ್ಮೆಂಟ್ ಅಲ್ಲಿ ಕೆಲಸ ಮಾಡುತ್ತಿದ್ದರು, ಅಕೌಂಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಗಂಡನ ತಂದೆ: ಪರಶುರಾಮ. ಪಿ. ದೊಡವಾಡ ಇವರ ಮಾವನವರು ಕೂಡ ಸರ್ಕಾರಿ ಪ್ರೌಢಶಾಲೆ ನರೇಂದ್ರ ಕ್ರಾಫ್ಟ್ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಗಂಡನ ತಾಯಿ: ಚಿತ್ರಾಂಗದಾ. ಪಿ. ದೊಡವಾಡ ಇವರ ಅತ್ತೆಯವರು ಇವರು ಸಂಸಾರದ ಜೊತೆಗೆ ಹೊಲೆಗೆ ಕೆಲಸವನ್ನು ಮಾಡುತ್ತಿದ್ದರು
ಟೈಲರ್ ಕಾರ್ಯ ದತ್ತ ಸಂಸಾರ ನೊಗ
ಮದುವೆಯಾಯಿತು. ಮನೆಯಲ್ಲಿ ಅತ್ತೆ ಉತ್ತಮ ಹೊಲಿಗೆ ಕಾರ್ಯ ಮಾಡುತ್ತಿದ್ದರು. ಕೂಡು ಕುಟುಂಬವಲ್ಲವೇ ಸೊಸೆ ಕೂಡ ಅತ್ತೆಯ ಜೊತೆಗೆ ಟೈಲರಿಂಗ್ ಕಾರ್ಯ ದಲ್ಲಿ ತೊಡಗಿದರು. ಎಷ್ಟರ ಮಟ್ಟದಲ್ಲಿ ಅಂದರೆ ಸರಕಾರಿ ಹುದ್ದೆ ಸೇರದೇ ಹೋಗಿದ್ದರೆ ಉತ್ತಮ ಟೈಲರ್ ಆಗಿರ್ತಿದ್ದೆ ಎಂದು ಹೆಮ್ಮೆಯಿಂದ ಹೇಳುವ ರೇಖಾ ಕೌಟುಂಬಿಕ ಜೀವನದಲ್ಲಿ ೯ ವರ್ಷಗಳ ಕಾಲ ಟೈಲರಿಂಗ್ ಕೆಲಸ ಮಾಡಿದ್ದು ಕೌಟುಂಬಿಕ ಬದುಕಿನಲ್ಲಿ ಇವರಿಗೆ ಮೂರು ಮಕ್ಕಳು ಒಂದು ಗಂಡು ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳು.
ನೌಕರಿಯತ್ತ ಬದುಕು
ಟೈಲರಿಂಗ್ ಜೀವನ ಸಾಗುತ್ತಿರುವಾಗ ಸರಕಾರಿ ಹುದ್ದಗೆ ಅರ್ಜಿ ಆಹ್ವಾನ ಕುರಿತು ಪ್ರಕಟಣೆ ಬಂತು. ಅರ್ಜಿ ಸಲ್ಲಿಸಿದ್ದೂ ಆಯಿತು.ಅದೃಷ್ಟ ಮತ್ತು ಪ್ರತಿಭೆ ಇದ್ದಲ್ಲಿ ಅವಕಾಶ ಹುಡುಕಿಕೊಂಡು ಬರುತ್ತದೆ ಎನ್ನುವಂತೆ ೨೦೦೫ರಲ್ಲಿ ಚಿತ್ರಕಲಾ ಶಿಕ್ಷಕಿ ಆಯ್ಕೆ ಆದರು ಅದು ಕೂಡ ದೂರದ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಸರ್ಕಾರಿ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ. ಪಾಮನಕಲ್ಲೂರು. ಎಂಬ ಗ್ರಾಮದಲ್ಲಿ. ಚಿತ್ರಕಲಾ ಶಿಕ್ಷಕಿಯಾಗಿ ಸೇವೆ ಪ್ರಾರಂಭಿಸಿದರು.
ಕಂಕುಳಲ್ಲಿ ಮಗು ಅಲ್ಲೊಂದು ಮನೆ ಮಾಡಿ ಚಿತ್ರ ಕಲಾ ಶಿಕ್ಷಕಿಯಾಗಿ ಬದುಕು. ಗಂಡ ಹುಬ್ಬಳ್ಳಿಯಲ್ಲಿ ಅಲ್ಲಿ ಇವರ ಜೊತೆಗೆ ಕಾರ್ಯ ನಿರ್ವಹಿಸುವ ಶಿಕ್ಷಕಿಯರು ತಮ್ಮ ಮನೆ ಮಗಳಂತೆ ಇವರನ್ನು ಕಂಡ ರೀತಿಯನ್ನು ನೆನೆದಾಗ ಭಾವನಾತ್ಮಕ ನಂಟು ಆ ದಿನಗಳಲ್ಲಿ ಹೇಗಿತ್ತು ಎಂಬುದು ಇವರ ಕಣ್ಣುಗಳು ಒದ್ದೆಯಾದಾಗ ಹೃದಯ ತುಂಬಿ ಬರುತ್ತದೆ.
ಎಲ್ಲೋ ದೂರದ ಸ್ಥಳದಲ್ಲಿ ನನ್ನವರು ನನ್ನ ಜೊತೆ ಇರದಂತಹ ಕಷ್ಟ ಕಾಲದಲ್ಲಿ ನನ್ನ ಅಕ್ಕಪಕ್ಕದ ಸಹೃದಯರ ಸಹಕಾರ ಕಂಡಾಗ ಯಾವ ಮನಸ್ಸಿಗೆ ತಾನೇ ಸಂತೋಷ ಆಗಲಿಕ್ಕಿಲ್ಲ ಹಾಗಾಗಿತ್ತು ಇವರ ನೌಕರಿ ಆರಂಭದ ದಿನಗಳು ಜೊತೆಗೆ ಇವರ ಪ್ರತಿಭೆಗೆ ಒಳ್ಳೆಯ ಅವಕಾಶ ದೊರಕುವ ಸೌಭಾಗ್ಯ ಆ ದಿನದಲ್ಲಿ ದೊರೆಯತೊಡಗಿದ್ದನ್ನು ಇಂದಿಗೂ ನೆನೆಯುವರು
ಶಿಕ್ಷಕ ವೃತ್ತಿ ಆರಂಭದಲ್ಲಿ ಮಗುವಿಗೆ ಅನಾರೋಗ್ಯ ಆದ ಸಂದರ್ಭದಲ್ಲಿ ಜೊತೆಗೆ ಇದ್ದ ಶಿಕ್ಷಕಿಯರು ಆ ಅಪರಿಚಿತ ಸ್ಥಳದಲ್ಲಿ ತಮಗೆ ಪರಿಚಿತರಿರುವ ವೈದ್ಯರನ್ನು ಸಂಪರ್ಕಿಸಿ ಮಗುವಿನ ಚಿಕಿತ್ಸೆಗೆ ನೆರವಾದದ್ದನ್ನು ತುಂಬಾ ಭಾವುಕರಾಗಿ ರೇಖಾ ಅವರು ನೆನೆಯುತ್ತಾರೆ.ಮಾನವೀಯ ಸಂಬಂಧಗಳು ಶಿಕ್ಷಕ ವೃತ್ತಿಯನ್ನು ಹೇಗೆ ಕೊಂಡೊಯ್ಯಬಲ್ಲವು ಎಂಬುದಕ್ಕೆ ತಮಗೆ ಸಹಕರಿಸಿದ ಹೈದ್ರಾಬಾದ್ ಕರ್ನಾಟಕ ಪ್ರಾಂತದ ತಮ್ಮ ನೌಕರಿ ಆರಂಭಿಕ ದಿನಗಳಲ್ಲಿ ಜರುಗಿದ ಸಂಗತಿಗಳನ್ನು ನೆನೆಯುವರು.
ರಾಯಚೂರಿನ ಶಾಲಾ ದಿನಗಳಲ್ಲಿ ಸಿಕ್ಕ ಅವಕಾಶಗಳು
ಆಗ ಹೆಣ್ಣು ಮಕ್ಕಳ ಶಿಕ್ಷಣ ಕ್ಕೆ ಪ್ರೋತ್ಸಾಹ ಕುರಿತು ಎನ್. ಪಿ. ಜಿ. ಇ. ಎಲ್ ಎಂಬ ಯೋಜನೆ ಆರಂಭವಾಗಿತ್ತು.ಈ ಯೋಜನೆ ಗೆ ಪ್ರತಿ ಶಾಲೆಯಿಂದ ಓರ್ವ ಶಿಕ್ಷಕರನ್ನು ಉಸ್ತುವಾರಿ ಗಾಗಿ ಆದೇಶ ಮಾಡಲಾಗುತ್ತಿತ್ತು.ಇವರ ಆಸಕ್ತಿ ಕಂಡು ಇವರನ್ನು ಆಗ ಸಂಚಾಲಕಿ ಜವಾಬ್ದಾರಿಯನ್ನು ನೀಡಲಾಗಿತ್ತು. ಸದರಿ ಯೋಜನೆಯ ಸಂಪೂರ್ಣ ಕಾರ್ಯ ನಿರ್ವಹಿಸುವ ಮೂಲಕ ಹೆಣ್ಣು ಮಕ್ಕಳಿಗೆ ಹಾಗೂ ಶಾಲೆಯ ಸಿಬ್ಬಂದಿಯ ಮೆಚ್ಚುಗೆಯನ್ನು ಗಳಿಸಿದ್ದರು.
ಪ್ರಶಸ್ತಿಗಳು
ಸರ್ವ ಶಿಕ್ಷಣ ಅಭಿಯಾನ ಪ್ರಶಸ್ತಿ ೨೦೦೯-೧೦.ರಾಜ್ಯಮಟ್ಟದ ಚಿತ್ರಕಲಾ ಪ್ರಶಸ್ತಿ ಶಾಲೆಯ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ದೊರಕಿದೆ ಎಂದು ಅಭಿಮಾನದಿಂದ ನುಡಿಯುವ ರೇಖಾ ಅವರು ತಮ್ಮ ಚಿತ್ರ ಕಲೆಗೆ ಪ್ರೋತ್ಸಾಹ ರಾಜ್ಯ ಮಟ್ಟದಲ್ಲಿ ದೊರಕಿದ ಆ ದಿನಗಳನ್ನು ನೆನೆಯುವರು ೨೦೧೨-೧೩ ಚಿನ್ನಾರಿ ಚಿತ್ರ ನಲಿ-ಕಲಿ (ಮುದ್ದುಮರಿ ಚಿತ್ರಬರಿ) ಚಟುವಟಿಕೆ ಆಧಾರಿತ ಚಿತ್ರಕಲಾ ಪುಸ್ತಕದಲ್ಲಿ ಇವರ ಹಲವಾರು ಚಿತ್ರಗಳು ಪ್ರಕಟಗೊಂಡವು. ತವರು ಜಿಲ್ಲೆಗೆ ವರ್ಗಾವಣೆ ತುಂಬಾ ದೂರದ ಸ್ಥಳದಲ್ಲಿ ನೌಕರಿಯೇನೋ ಆರಂಭವಾಯಿತು.ಮಕ್ಕಳ ಶಿಕ್ಷಣ ಕೌಟುಂಬಿಕ ಬದುಕು ಸಾಗಲು ತವರು ಜಿಲ್ಲೆಯತ್ತ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಯಿತು. ಶೈಕ್ಷಣಿಕ ಪ್ರೋತ್ಸಾಹ ಚನ್ನಾಗಿ ಸಾಗುತ್ತಿದ್ದುದು ಒಂದೆಡೆ ಆದರೆ ಕುಟುಂಬದ ನಿರ್ವಹಣೆ ಮತ್ತೊಂದೆಡೆ.ಅದಕ್ಕೆ ಕಾಲ ಕೂಡಿ ಬಂದಿತು. ರಾಯಚೂರು ಜಿಲ್ಲೆಯಿಂದ ಧಾರವಾಡ ಜಿಲ್ಲೆಗೆ ೨೦೧೩ ರಂದು ವರ್ಗಾವಣೆ ಆಯಿತು. ದಿನಾಂಕ ೨೭-೮-೨೦೧೩
ಧಾರವಾಡ ಜಿಲ್ಲೆ ನವಲಗುಂದ್ ತಾಲೂಕ್ ಅಣ್ಣಿಗೇರಿ ಸರ್ಕಾರಿ ಮಾದರಿಯ ಗಂಡು ಮಕ್ಕಳ ಶಾಲೆ ನಂಬರ್ ೦೧, ಸೇವೆ ಪ್ರಾರಂಭಿಸಿದರು. ಇವರು, ವಿಷಯ ಶಿಕ್ಷಕರಾಗಿ, ತರಗತಿಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿವಿಧ ಅವಕಾಶಗಳು..
ಇವರ ಪ್ರತಿಭೆಯನ್ನು ಗುರುತಿಸಿ ಡಿಸ್ಟಿಕ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಅಂಡ್ ಟ್ರೈನಿಂಗ್ ಬಿಜಾಪುರ್, ಮಕ್ಕಳಿಗಾಗಿ ಚಿತ್ರಕಲಾ ವಿಡಿಯೋ ಪಾಠ ಚಿತ್ರಣವಾಗಿದೆ. ಲಾಕ್ಡೌನ್ ಸಮಯದಲ್ಲಿ ಕಲಾ ಸಾರಥ್ಯದಲ್ಲಿ ಹಲವಾರು ಚಿತ್ರಕಲಾವಿದ ಹಾಗೂ ಕ್ರಾಫ್ಟ್ ಸಂಬಂಧಿತ ವಿಡಿಯೋ ಪಾಠಗಳನ್ನು ಮಾಡುವ ಅವಕಾಶ ಕೂಡ ಲಭ್ಯವಾಯಿತು.
ಕರ್ನಾಟಕ ರಾಜ್ಯ ಬಾಲ ವಿಕಾಸ ಅಕಾಡೆಮಿ ಹಾಗೂ ಅಪರ ಆಯುಕ್ತ ಕಚೇರಿ ಸಾರ್ವ ಜನಿಕ ಶಿಕ್ಷಣ ಇಲಾಖೆ ಧಾರವಾಡ ಈ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದರು.
೨೦೨೨ ರಂದು ಲೂಸಿ ಸಾಲ್ಡಾನರವರ ದತ್ತಿ ಕಾರ್ಯಕ್ರಮದಲ್ಲಿ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿ ದೊರಕಿದೆ. ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ದೊರಕಿದೆ. ೨೦೨೩ರಲ್ಲಿ ಮಕ್ಕಳ ರತ್ನ ರಾಜ್ಯ ಪ್ರಶಸ್ತಿ ದೊರಕಿದೆ ಹಾಗೂ ಕರ್ನಾಟಕ ಶಿಕ್ಷಣ ಸೇವಾ ರತ್ನ ಪ್ರಶಸ್ತಿ .ಇವರ ಕಲಾ ಪ್ರೌಢಿಮೆಯನ್ನು ಗುರುತಿಸಿ ನೀಡಿದ್ದು ಕೂಡ ಹೆಮ್ಮೆಯ ಸಂಗತಿ
*ರೇಖಾಚಿತ್ರಗಳು ಕವನ ಕತೆಗಳಲ್ಲಿ*
ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿರುವ ಪಬ್ಲಿಕ್ ಟುಡೇ ಎಂಬ ಅಂತರ್ಜಾಲ ತಾಣದಲ್ಲಿ ಇವರ ರೇಖಾಚಿತ್ರವನ್ನು ಬಳಕೆಯಾಗ ತೊಡಗಿದವು.ಯಾರು ನಮ್ಮ ವರು ಲೇಖನ ಕಾರ್ತಿಕ ಗೋಪಶೆಟ್ಟಿ
ಭಕ್ತಿ ಮತ್ತು ಪ್ರಾರ್ಥನೆ ಲೇಖನ ಮುಕ್ತಾ ಪಶುಪತಿಮಠ
ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳರವರ ನಗು ತುಂಬಿದ ಮನ.ಕೋರಿಕೆ. ಕ್ಷಮಿಸು. ಸಹಜ ಸುಂದರಿ. ನಿವೇದನೆ ಮುಗ್ಧ ಮೌನಿ.ನಿನ್ನಾ ನೆನಪೇ. ಕನವರಿಕೆ. .ನಿನ್ನ ನೆನಪಿಗೆ.ಅಮ್ಮನ ಮಡಿಲು. ಪ್ರೇಮ ಸಂಕೋಲೆ.ಮನಸು ತೆರೆದುಕೋ. ಕನಸುಗಳ ಕನವರಿಕೆ. ನಾನೇನು ಹೇಳಲಿ. ಅಣ್ಣ ನಿನ್ನ ನೆನೆದು ಕಣ್ಣೋಟ ಭಾವದೊಳು ಬಾಲ್ಯ ನೆನೆಯಲು.ಇನಿಯನ ಕಾತರ.ಕವನಗಳಲ್ಲಿ. ಭಾವಕ್ಕೆ ಜೊತೆಯಾಗೋ ಜೀವ ಎಂಬ ಕತೆಯಲ್ಲಿ ಯುವಲಹರಿ ಬರಹ ಪ್ರೀತಿ ಎಂದರೆ ಹೀಗೇನಾ.? ಬರಹದಲ್ಲಿ ದೂರದ ಗುಲ್ಬರ್ಗಾದ ಲೇಖಕಿ ಹಾಗೂ ಶಿಕ್ಷಕಿ ನಂದಿನಿ ಸಹಬಾಳ್ ಅವರ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಕುರಿತ ಕವನದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ಮೇಘನ ಅವರ ಲೇಖನ ಅಮ್ಮನ ಪ್ರೀತಿ ಬರಿದಾಗದ ಖಜಾನೆ.ಗುಲ್ಬರ್ಗಾದ ಲೇಖಕಿ ಅನ್ವಿತಾ ಅವರ ಬರಹ ಸೃಷ್ಟಿಯೇ ತಾಯಿ. ಕಿತ್ತೂರಿನ ಕವಯತ್ರಿ ಮೀನಾಕ್ಷಿ ಸೂಡಿಯವರ ಕವನ ಎವ್ವಾ ನೀ ನನ್ನ ಜೀವನದಲ್ಲಿ ಇವರ ರೇಖಾಚಿತ್ರಗಳು ಪ್ರಕಟವಾಗುವ ಮೂಲಕ ವಿವಿಧ ಪತ್ರಿಕೆಯಲ್ಲಿ ರೇಖಾಚಿತ್ರಗಳು ಬಳಕೆಯಾಗುವ ಮೂಲಕ ಇವರ ಕಲಾ ಪ್ರೌಢಿಮೆಯನ್ನು ಗುರುತಿಸುವಂತಾಗಿರುವುದು ಕೂಡ ಅಭಿಮಾನದ ಸಂಗತಿ. ಅನೇಕ ಶಿಕ್ಷಕ ಶಿಕ್ಷಕಿಯರು ತಮ್ಮ ಬರಹಗಳಿಗೆ ಚಿತ್ರ ತಗೆದು ಕೊಡುವಂತೆ ಇವರನ್ನು ಕೇಳುತ್ತಿರುವುದು ಕೂಡ ಹೆಮ್ಮೆಯ ಸಂಗತಿ
ಚಂದ್ರಗೌಡ ಕುಲಕರ್ಣಿ ಎಂಬ ಶಿಕ್ಷಕರು ಅನವರತ ಇವರ ಹೆಸರು ನೆನಿಯಬೇಕ ಎಂಬ ಕವನದಲ್ಲಿ ಇವರ ರೇಖಾಚಿತ್ರ ಚಿತ್ರದಲ್ಲಿ ಮೂಡಿಬಂದ ಲಾಲ್ ಬಹದ್ದೂರ್ ಶಾಸ್ತ್ರೀಜಿ ಹಾಗೂ ಮಹಾತ್ಮ ಗಾಂಧಿ ಅವರ ಚಿತ್ರವನ್ನು ಬಳಸಿಕೊಂಡಿರುವುದನ್ನು ಸ್ಮರಿಸಬಹುದು
ಕೌಟುಂಬಿಕ ಬದುಕು
ರೇಖಾ ಮೊರಬ ಅವರಿಗೆ ಮೂರು ಜನ ಮಕ್ಕಳು. ಒಳ್ಳೆಯ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಮೂಲಕ ಉತ್ತಮ ಗೃಹಿಣಿ ಆಗಿರುವರು.ಗಂಡು ಮಗನ ಹೆಸರು ಮಂಜುನಾಥ್ ನಾ ದೊಡವಾಡ ಇವನು ಶಿಕ್ಷಣ: ಬಿಕಾಂ ಓದುತ್ತಿರುವನು.ಹೆಣ್ಣು ಮಗಳ ಹೆಸರು ಸುಪ್ರಿಯಾ ನಾ ದೊಡವಾಡ.ಇವಳು ಬಿ ಎಸ್ ಸಿ ಓದುತ್ತಿರುವಳು.ಕೊನೆ ಮಗಳ ಹೆಸರು: ಪೂನಂ ನಾ ದೊಡವಾಡ. ಪಿಯುಸಿ ಓದುತ್ತಿರುವಳು
ಬಹುಮುಖ ಪ್ರತಿಭೆಯ ಶಿಕ್ಷಕಿ
ರೇಖಾ ಕೇವಲ ಚಿತ್ರಕಲಾ ಶಿಕ್ಷಕಿ ಮಾತ್ರ ವಲ್ಲ ಭಾವಗೀತೆ ಭಕ್ತಿ ಗೀತೆ ಜಾನಪದ ಗೀತೆಗಳನ್ನು ಹವ್ಯಾಸಿಯಾಗಿ ಹಾಡುವುದಲ್ಲದೇ ತಮ್ಮ ತರಗತಿಯ ಮಕ್ಕಳಿಗೆ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸಿ ಮಕ್ಕಳ ಪ್ರತಿಭೆ ಗೆ ಪ್ರೋತ್ಸಾಹ ನೀಡುತ್ತಿರುವರು.ಇವರು ಕಿತ್ತೂರು ಚನ್ನಮ್ಮ ನಾಟಕದಲ್ಲಿ ಸೇವಕಿಯಾಗಿ ಪಾತ್ರ ನಿರ್ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.ಇವರು ಇನ್ನೂ ಬಿಡುಗಡೆಯಾಗದ ಕಿರುಚಿತ್ರ ಹೆಳವನ ಮಗಳು ಕಿರುಚಿತ್ರದಲ್ಲಿ ಅಭಿನಯಿಸಿದ್ದು ಇವರ ಮಗಳು ಕೂಡ ಹೆಳವನ ಮಗಳ ಗೆಳತಿಯ ಪಾತ್ರದಲ್ಲಿ ಅಭಿನಯಿಸಿರುವುದು ಹೆಮ್ಮೆಯ ಸಂಗತಿ.
ಹವ್ಯಾಸಗಳು
ಮಕ್ಕಳಿಗೆ ಅಭಿನಯ ಗೀತೆ ಹಾಡು ಡ್ಯಾನ್ಸು ಕಲಿಸುವುದು ಇವರ ಹವ್ಯಾಸವಾಗಿದ್ದು ಇತ್ತೀಚಿಗೆ ಧಾರವಾಟದ ರಂಗಾಯಣದಲ್ಲಿ ಜರುಗಿದ ಬೇಸಿಗೆ ಸಂಭ್ರಮ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಚಿತ್ರಕಲೆಯನ್ನು ಇವರು ಉಚಿತವಾಗಿ ಕಲಿಸುವ ಮೂಲಕ ತಮ್ಮ ಕಲೆಯನ್ನು ಮಕ್ಕಳಿಗೆ ಧಾರೆ ಎರೆದಿರುವರು. ಬೇಸಿಗೆ ಸಂಭ್ರಮ ಕಾರ್ಯಕ್ರಮದಲ್ಲಿ ಇವರಿಗೆ ಸಿದ್ದಶ್ರೀ ಪ್ರಶಸ್ತಿ ನೀಡಿ ಗೌರವಿಸಿದರು. ಹೀಗೆ ಇವರ ಬಹುಮುಖ ಪ್ರತಿಭೆಗೆ ಗೌರವ ಕೂಡ ಸಲ್ಲುವ ಮೂಲಕ ಇವರ ವ್ಯಕ್ತಿತ್ವಕ್ಕೆ ಮೆರಗು ಬರುತ್ತಿರುವುದು ಕೂಡ ಹೆಮ್ಮೆಯ ಸಂಗತಿ. ಯಾವ ಪ್ರತಿಫಲಾಪೇಕ್ಷೆಯಿಲ್ಲದ ಇವರ ಕಲೆ ಸದುಪಯೋಗವಾಗುತ್ತಿರುವುದು. ಇವರ ವಿದ್ಯಾರ್ಥಿಗಳು ಕೂಡ ಪ್ರತಿಭಾಕಾರಂಜಿಯಲ್ಲಿ ಭಾಗವಹಿಸಿ ಚಿತ್ರಕಲೆ ಜಾನಪದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಬಂದು ಜಿಲ್ಲಾಮಟ್ಟದವರೆಗೆ ಹೋಗಿ ಬಂದಿರುವುದನ್ನು ನೆನೆಯುವರು
ವೈ.ಬಿ.ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ-೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
೯೪೪೯೫೧೮೪೦೦ ೮೯೭೧೧೧೭೪೪೨