ಪೌರಾಯುಕ್ತ,ಕಂದಾಯ ಅಧಿಕಾರಿ,ಕರ ವಸೂಲಿಗಾರ, ದ್ವಿತಿಯ ದರ್ಜೆ ಸಹಾಯಕಿ ಸೇರಿದಂತೆ ಒಟ್ಟು ಎಂಟು ಜನ ಅಧಿಕಾರಿಗಳನ್ನು ಅಮಾನತ್ ಮಾಡಿ ಆದೇಶ ಮಾಡಲಾಗಿದೆ..
ಬೀದರ: ಮೂರೇ ಗಂಟೆಯಲ್ಲಿ ರಾತ್ರೋ ರಾತ್ರಿ 358 ನೀವೇಶನಗಳಿಗೆ ಖಾತಾ ನೀಡಿದ್ದ ಪ್ರಕರಣ, ಮಳಿಗೆಗಳ ಹಂಚಿಕೆಯಲ್ಲಿ ವರ್ಷದ ಹಿಂದೆ ನಡೆದಿದ್ದ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆಯನ್ನಾಧರಿಸಿ ನಗರಸಭೆಯ ಈ ಹಿಂದಿನ ಪೌರಾಯುಕ್ತ, ಕಂದಾಯ ಅಧಿಕಾರಿ ಸೇರಿದಂತೆ 8 ಜನರನ್ನು ಅಮಾನತ್ಗೊಳಿಸಿ ಇಲಾಖೆಯ ನಿರ್ದೇಶಕರಾದ ಎನ್ ಮಂಜುಶ್ರೀ ಆದೇಶ ಹೊರಡಿಸಿದ್ದಾರೆ.
ಈ ಹಿಂದಿನ ಪೌರಾಯುಕ್ತ ರವೀಂದ್ರನಾಥ ಅಂಗಡಿ,ಹಿಂದಿನ ಕಂದಾಯ ಅಧಿಕಾರಿ ಸವೀತಾ ರೇಣುಕಾ,ಕಂದಾಯ ನೀರಿಕ್ಷರಾದ ರಾಜುಕುಮಾರ,ಸಂಗಮೇಶ ಕರ ವಸೂಲಿಗಾರ ರಮೇಶ ಎಲ್ ರಾವ , ದೀಪಕ ಹಾಗೂ ಹಿರಿಯ ಆರೋಗ್ಯ ನೀರಿಕ್ಷಕ ಸೈಯದ್ ಶಾಹಾ ಅಶ್ಪಾಕ್ ಅಲಿ, ದ್ವೀತಿಯ ದರ್ಜೆ ಸಹಾಯಕಿ ಪರೀದಾ ಚಂದಾ ಅವರನ್ನು ಮೇ 20 ರಂದು ಅಮಾನತ್ ಮಾಡಿ ಆದೇಶ ಮಾಡಲಾಗಿದೆ..
ಈ ಅಕ್ರಮದ ಕುರಿತಂತೆ ಮೇ ೨೦ ರಂದು ಪತ್ರಿಕೆಯಲ್ಲಿ ವರದಿ ಪ್ರಸಾರವಾಗಿತ್ತು. ವರದಿಯಿಂದ ಎಚ್ಚೆತ್ತ ಇಲಾಖೆಯ ಹಿರಿಯ ಅಧಿಕಾರಿಗಳು ಎಂಟು ಜನರನ್ನು ಅಮಾನತ್ ಮಾಡಿ ಆದೇಶ ಮಾಡಿದ್ದಾರೆ.
ಡಿಜಿಟಲ್ ಖಾತೆ ಮತ್ತು ಮ್ಯುಟೇಶನ ಮಾಡಿ ನಗರಸಭೆಗೆ ಆರ್ಥಿಕ ನಷ್ಟವನ್ನು ಈ ಅಧಿಕಾರಿಗಳು ಮಾಡಿದ್ದು ಸಾಬಿತಾಗಿದೆ.
ಪೌರಾಯುಕ್ತರು ಸೇರಿದಂತೆ ಹಲವು ಅಧಿಕಾರಿಗಳು ಬೆರೆಕಡೆ ವರ್ಗಾವಣೆ ಗೊಂಡಿದ್ದರು ಕೂಡ ಅಮಾನತ್ ಶಿಕ್ಷೆಯಿಂದ ತಪ್ಪಿಸಿಕೊಂಡಿಲ್ಲ.. ಮೆಲಾಧಿಕಾರಿಗಳ ಅನುಮತಿ ಪಡೆಯದೆ ಕೇಂದ್ರ ಸ್ಥಾನ ಬೀಡತಕದಲ್ಲ ಎಂದು ಆದೇಶಿಸಲಾಗಿದೆ..
ಪೌರಾಡಳಿತ ಇಲಾಖೆಯ ತಂಡ ಬೆಂಗಳೂರಿನಿಂದ ಬಂದು ತನಿಖೆ ನಡೆಸಿ ವರದಿ ಸಲ್ಲಿಸಿತ್ತು..ಬೀದರ ಜಿಲ್ಲೆಯ ಎಸಿಎಸ್.ಟಿ ಎಸ್ಎಸ್ಟಿ ಕೈಗಾರಿಕಾ ಸಂಘವು ಈ ಪ್ರಕರಣವನ್ನು ಬೆಳಕಿಗೆ ತಂದಿತ್ತು…