ಜೂನ್ ತಿಂಗಳಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ…?!
ನಿಮ್ಮ ಸಂಘದ ರಾಜ್ಯಾಧ್ಯಕ್ಷರು ಮಾತನಾಡಿದ್ದೇನು…?
ಈ ಕುರಿತು ನಿಖರ ನಿರ್ದಿಷ್ಟ ಸುದ್ದಿ ನಿಮ್ಮ PUBLIC TODAY ಯಲ್ಲಿ ಮಾತ್ರ
ಬೆಂಗಳೂರು: ವಿಧಾನಸಭೆ ಚುನಾವಣೆಗೂ ಮೋದಲೆ ಶಿಕ್ಷಕರ ಸಾಮಾನ್ಯ ವರ್ಗಾವಣೆ ಆರಂಭವಾಗುತ್ತದೆ ಎಂದು ನೀರಿಕ್ಷಿಸಲಾಗಿತ್ತು.ಆದ್ರೆ ಚುನಾವಣೆ ನೀತಿ ಸಂಹಿತೆ ಇದ್ದಿದ್ದರಿಂದ ವರ್ಗಾವಣೆಗೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿತ್ತು…
ಇದೀಗ ನೀತಿ ಸಂಹಿತೆ ಮುಗಿದು,ಹೊಸ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಶಿಕ್ಷಕರ ವರ್ಗಾವಣೆಯಲ್ಲಿರುವ ಎಲ್ಲ ಗೊಂದಲಗಳಿಗೆ ಪರಿಹಾರ ಬಗೆ ಹರಿದಿದ್ದು,ಶೀಘ್ರದಲ್ಲೇ ವರ್ಗಾವಣೆ ಆರಂಭವಾಗಲಿದೆ ಎಂಬ ಆಶಾಭಾವನೆಯನ್ನು ನಮ್ಮ ರಾಜ್ಯದ ಶಿಕ್ಷಕರು ಇಟ್ಟುಕೊಂಡಿದ್ದಾರೆ.
ಒಟ್ಟು 88.324 ಶಿಕ್ಷಕರು ವರ್ಗಾವಣೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಎಲ್ಲವು ಅಂದುಕೊಂಡಂತೆ ನಡೆದಿದ್ದಿರೆ,ಇದೇ ಜೂನ ತಿಂಗಳಿನಿಂದ ವರ್ಗಾವಣೆ ಪ್ರಕ್ರಿಯೆ ಮುಗಿಯಬೇಕಿತ್ತು.ಆದ್ರೆ ಇದುವರೆಗೂ ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್ ಆರಂಭವಾಗಿಲ್ಲ.
ಜನೇವರಿ 24 ರಂದು ನಡೆಯಬೇಕಿದ್ದ ಕೌನ್ಸಲಿಂಗ್ ತಾತ್ಕಾಲಿಕವಾಗಿ ಬಂದ ಆಗಿ ನಾಲ್ಕು ತಿಂಗಳು ಆಗಿವೆ.
ಕೆಲವೆ ದಿನಗಳಲ್ಲಿ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ಶಿಕ್ಷಕರು ವರ್ಗಾವಣೆ ಕೌನ್ಸಿಲಿಂಗಗೆ ಸರಕಾರ ಗ್ರೀನ ಸಿಗ್ನಲ್ ನೀಡುತ್ತಾ ಎಂಬ ಪ್ರಶ್ನೇ ರಾಜ್ಯದ ಶಿಕ್ಷಕರಲ್ಲಿ ಕಾಡುತ್ತಿದೆ..
ಈ ಕುರಿತು ಪಬ್ಲಿಕ್ ಟುಡೆಯೊಂದಿಗೆ ಮಾತನಾಡಿದ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್,ಷಡಾಕ್ಷರಿಯವರು, ಶಿಕ್ಷಕರ ವರ್ಗಾವಣೆಯಲ್ಲಿರುವ ಎಲ್ಲ ಸಮಸ್ಯೆಗಳನ್ನು ನಿವಾರಣೆ ಮಾಡಲಾಗಿದೆ.ವರ್ಗಾವಣೆ ಕೌನ್ಸಿಲಿಂಗ್ ಆರಂಬಿಸುವಂತೆ ಎರಡು ದಿನಗಳಲ್ಲಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವುದು ಎಂದರು..ಅಥವಾ ಶಿಕ್ಷಣ ಇಲಾಖೆಗೆ ಹೊಸ ಸಚಿವರು ಬಂದ ಕೂಡಲೇ ಅವರ ಅನುಮತಿ ಪಡೆದುಕೊಂಡು ಶಿಕ್ಷಕರ ವರ್ಗಾವಣೆ ಆರಂಭವಾಗಲಿದೆ ಎಂದರು..ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಿದ್ದರಿದ್ದಾರೆ,ಕೇವಲ ಸರಕಾರದ (ಸಚಿವರ)ಅನುಮತಿಗಾಗಿ ಕಾಯುತ್ತಿದ್ದಾರೆ ಎಂದರು..ಎರಡು ದಿನಗಳಲ್ಲಿ ಈ ಕುರಿತು ಸರಕಾರದ ಗಮನ ಸೆಳೆಯುವುದಾಗಿ ತಿಳಿಸಿದರು..
ಇನ್ನೂ ಶಿಕ್ಷಕರ ಸಂಘಟನೆಯ ಮುಖ್ಯಸ್ಥತರನ್ನು ಕೂಡ ನಿಮ್ಮ ಪಬ್ಲಿಕ್ ಟುಡೆ ಮಾತನಾಡಿಸುವ ಪ್ರಯತ್ನ ಮಾಡಿತು, ಕರ್ನಾಟಕ ರಾಜ್ಯ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾದ್ಯಕ್ಷರಾದ ಅಶೋಕ ಎಮ್ ಸಜ್ಜನ ಅವರು ಮಾತನಾಡಿ, ನಾವು ಕೂಡ ರಾಜಧಾನಿ ಬೆಂಗಳೂರಿಗೆ ನಮ್ಮ ನಿಯೋಗದೊಂದಿಗೆ ತೆರಳಿ ಸಿಎಮ್, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಶಿಕ್ಷಕರ ಕೌನ್ಸಲಿಂಗ್ ಪ್ರಕ್ರಿಯೆ ಆರಂಭಿಸುವಂತೆ ಒತ್ತಾಯ ಮಾಡುತ್ತೇವೆ ಎಂದರು,ಸಂಘದ ಗೌರವ ಅದ್ಯಕ್ಷರಾದ ಎಲ್ ಆಯ್ ಲಕ್ಕಮ್ಮನ್ನವರ ಹಾಗೂ ಸಂಘದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಅವರು ಕೂಡ ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅವರು ಮಾತನಾಡಿ, ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ,ಎರಡು ಮೂರು ದಿನಗಳಲ್ಲಿ ಈ ಕುರಿತು ಇಲಾಖೆಯ ಅಧಿಕಾರಿಗಳ ಹಾಗೂ ಸಚಿವರ ಗಮನ ಸೆಳೆಯುತ್ತೇವೆ ಎಂದರು…
ಒಟ್ಟಿನಲ್ಲಿ ರಾಜ್ಯದ ಶಿಕ್ಷಕರ ಕೌನ್ಸಲಿಂಗ್ ಪ್ರಕ್ರಿಯೆ ಆರಂಭ ಜೂನ ತಿಂಗಳ ಅಂತ್ಯಕ್ಕೆ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.ಏಕೆಂದರೆ ಹೊಸ ಸರಕಾರ ಇವಾಗಷ್ಟೇ ಬಂದಿದ್ದು, ಇದುವರೆಗೂ ಶಿಕ್ಷಣ ಸಚಿವರು ಯಾರು ಅಂತ ಗೊತ್ತಾಗಿಲ್ಲ..ಶಿಕ್ಷಣ ಇಲಾಖೆಗೆ ಮುಂದಿನವಾರ ಹೊಸ ಸಚಿವರ ಆಗಮನವಾಗಲಿದೆ.ತದನಂತರ ವರ್ಗಾವಣೆ ಕೌನ್ಸಲಿಂಗ್ ನ ಚಿತ್ರಣ ತಿಳಿಯಲಿದೆ..
ಜೂನ ತಿಂಗಳ ಮೋದಲೆ ಶಿಕ್ಷಕರ ವರ್ಗಾವಣೆ ಮುಗಿಯಬೇಕಿತ್ತು?ಕಾರಣಾಂತರಗಳಿಂದ ಇದುವರೆಗೂ ಆರಂಭವಾಗಿಲ್ಲ..ಮುಂದಿನ ತಿಂಗಳು ಆರಂಭವಾಗುತ್ತಾ?ಮತ್ತೆ ಆರು ತಿಂಗಳು ಮುಂದೆ ಹೋಗುತ್ತಾ? ಮುಂದಿನ ಅಪಡೆಟ್ ಮಾಡಲಾಗುವುದು