SSAಶಿಕ್ಷಕರ ವೇತನ ವಿಳಂಭ ಖಂಡಿಸಿ ವಿಜಯಪುರ ಜಿಲ್ಲೆ ಡಿಡಿಪಿಐ ಕಛೇರಿ ಮುಂದೆ ಪ್ರತಿಭಟನೆಗೆ ಕರೆ.
ಆತ್ಮೀಯ ಶಿಕ್ಷಕರೇ ಸತತ ಮೂರು ತಿಂಗಳಿನಿಂದಲೂ ವೇತನ ಪಡೆಯದ ನಮ್ಮ ಶಿಕ್ಷಕರ ಕೌಟುಂಬಿಕ ಸ್ಥಿತಿ ಚಿಂತಾಜನಕವಾಗಿದೆ. ಒಂದು ವಾರಗಳ ಕಾಲ ನಾವು ಬೆಂಗಳೂರಿನ ಸಮಗ್ರ ಶಿಕ್ಷಣ ಇಲಾಖೆ, ಹಾಗೂ ಆರ್ಥಿಕ ಇಲಾಖೆ ವಿಧಾನಸೌಧ ಕಛೇರಿಗಳಲ್ಲಿ ಪ್ರಯತ್ನಿಸಿದರೂ ಸಹ ನಮಗೆ ವೇತನದ ಭರವಸೆ ಸಿಗಲಿಲ್ಲ. ವೇತನ ವಿಳಂಬಕ್ಕೆ ಸೂಕ್ತವಾದ ಮಾಹಿತಿಯನ್ನು ಸಂಬಂಧಿಸಿದ ಅಧಿಕಾರಿಗಳು ಸಕಾಲಕ್ಕೆ ಒದಗಿಸದೆ ಇರುವುದೇ ನಮ್ಮ ವೇತನ ವಿಳಂಭಕ್ಕೆ ಕಾರಣ ಎಂದು ನಮಗೆ ಆರ್ಥಿಕ ಇಲಾಖೆಯ ಮುಖ್ಯಸ್ಥರಿಂದ ತಿಳಿದುಬಂದಿತು.
ಆದ್ದರಿಂದ ವೇತನ ವಿಳಂಬ ಖಂಡಿಸಿ ದಿನಾಂಕ 22-05-2023 ಸೋಮವಾರದಂದು ಸಮಯ ಬೆಳಿಗ್ಗೆ 9-00 ಗಂಟೆಗೆ ಜಿಲ್ಲೆಯ ಎಲ್ಲ ಶಿಕ್ಷಕರು ತಪ್ಪದೆ ಪ್ರತಿಭಟನೆಯಲ್ಲಿ ಭಾಗವಹಿಸಲು ಈ ಮೂಲಕ ವಿನಂತಿ.
🙏🙏🙏🙏🙏
ಇಂದ ಜಿಲ್ಲೆಯ ಎಲ್ಲ SSA , TGT RMSA ಶಿಕ್ಷಕರು ಮತ್ತು CRPಗಳು
🙏🙏🙏🙏🙏🙏