ನುಡಿದಂತೆ ನಡೆಯುತ್ತಾ ಸಿಎಮ್ ಸಿದ್ದರಾಮಯ್ಯ ನೇತೃತ್ವದ ಸರಕಾರ? ಇವತ್ತು ಕೈಗೊಂಡ ನಿರ್ಣಯಗಳೇನೆ? ಪದವಿಧರರಿಗೆ ಹಾಗೂ ಡಿಪ್ಲೊಮಾ ಮುಗಿಸಿದ ಯುವಕರಿಗೆ ಭರ್ಜರಿ ಗುಡ್ ನ್ಯೂಸ್..
ಬೆಂಗಳೂರ: ಸಿದ್ದರಾಮಯ್ಯನವರ ನೇತೃತ್ವದ ಮೋದಲ ಸಚಿವ ಸಂಪುಟ ಸಭೆ ಇವತ್ತು ನಡೆಯಿತು.
ಡಿ.ಕೆ ಶಿವಕುಮಾರ ಉಪ ಮುಖ್ಯಮಂತ್ರಿ ಹಾಗೂ ಎಂಟು ಜನ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವಿಕಾರ ಮಾಡಿದ್ದಾರೆ ಎಂದು ಮಾನ್ಯ ಮುಖ್ಯ ಮಂತ್ರಿಗಳು ಸುದ್ದಿಗೊಷ್ಠಿಯಲ್ಲಿ ಮಾಹಿತಿ ನೀಡಿದರು.
ಮೋದಲ ಸಚಿವ ಸಂಪುಟದಲ್ಲಿ ಕೆಲ ನಿರ್ಣಯಗಳನ್ನು ತೆಗದುಕೊಳ್ಳಲಾಯಿತು..
ಪ್ರಮುಖ ಅಂಶಗಳು..
ಚುನಾವಣೆ ಪ್ರಣಾಳಿಕೆಯಲ್ಲಿ ನೀಡುರುವ ಅಂಶಗಳನ್ನು ಈಡೇರಿಸುತ್ತೇವೆ ಎಂದರು.
ಐದು ಗ್ಯಾರೆಂಟಿಗಳನ್ನು ಘೋಷಣೆ ಮಾಡಿದ ಮುಖ್ಯ ಮಂತ್ರಿ ಶ್ರೀ ಸಿದ್ದರಾಮಯ್ಯ..
೧..ಸಚಿವ ಸಂಪುಟದ ಸಭೆಯಲ್ಲಿ , ೨೦೦ ಯುನಿಟ್ ವಿದ್ಯುತ್ ಫ್ರಿ ಎಲ್ಲ ಮನೆಗಳಿಗೆ..
೨.. ಬಿಪಿಎಲ್ ಕಾರ್ಡದಾರರಿಗೆ ಪ್ರತಿಯೊಬ್ಬರಿಗೆ ೧೦ ಕೆಜಿ ಅಕ್ಕಿ.
೩.ಮನೆಯೊಡತಿಗೆ ೨೦೦೦ ರೂಪಾಯಿ..
೪..ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ಫ್ರೀ..
೫.ಬಿಎ,ಬಿಎಸ್ಸಿ, ಪದವಿಧರರಿಗೆ ನಿರುದ್ಯೋಗಿ ಭತ್ಯೆ..ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ನಿರುದ್ಯೊಗಿ ಭತ್ಯೆ..
ಡಿಪ್ಲೊಮಾದವರಿಗೆ ಒಂದು ಸಾವಿರದ ಐದು ನೂರ ರೂಪಾಯಿ ನಿರುದ್ಯೋಗಿ ಭತ್ಯೆ..ಇವುಗಳಿಗೆ ತಾರ್ಕಿಕವಾಗಿ ಘೋಷಣೆ ಮಾಡಿದರು.. ಇದು ಎರಡು ವರ್ಷ ಮಾತ್ರ ಪದವಿಧರರು ಹಾಗೂ ಡಿಪ್ಲೊಮಾ ಮಾಡಿದ ವಿದ್ಯಾರ್ಥಿಗಳು ಲಾಭ ಪಡೆಯಲಿದ್ದಾರೆ..
ಮುಂದಿನ ಸಚಿವ ಸಂಪುಟದಲ್ಲೀಯೇ ಸಂಪೂರ್ಣ ವಿವರಣೆ ಮಾಡಲಾಗುವುದೆಂದರು…ಸಚಿವ ಸಂಪುಟದಲ್ಲಿಯೇ ಐದು ಗ್ಯಾರೆಂಟಿಗಳನ್ನು ಜನರಿಗೆ ತಲುಪಿಸುತ್ತೇವೆ.ಮುಂದಿನ ವಾರವೇ ಈ ಯೋಜನೆಗಳ ರೂಪು ರೇಷಗಳನ್ನು ಹೇಳಲಾಗುದೆಂದರು..
ಪುನ: ಇಂದಿರಾ ಕ್ಯಾಂಟಿನ್ ಆರಂಭಿಸಲಾಗುವುದು..
ಸೋಮವಾರ, ಮಂಗಳವಾರ ಹಾಗೂ ಬುಧವಾರದಂದು ಅಧೀವೇಶನ ನಡೆಸಲಾಗುವುದೆಂದರು..
ಈ ಅಧಿವೇಶನದಲ್ಲಿ ಎಲ್ಲ ಶಾಕಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದರು..
ಆರ್ ವಿ ದೇಶಪಾಂಡೆ ಅವರು ಹಂಗಾಮಿ ಸ್ಪಿಕರ ಆಗಿರುತ್ತಾರೆ ಎಂದರು..
ಎಲ್ಲ ಗ್ಯಾರೆಂಟಿ ಈಡೇರಿಸಲು ೫೦ಸಾವಿರ ಕೋಟಿ ರೂಪಾಯಿ ಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯಾವರು ಹೇಳಿದರು. ಕರ್ನಾಟಕದಿಂದ ನಾಲ್ಕು ಲಕ್ಷ ಕೋಟಿ ರೂಪಾಯಿ ಹಣವನ್ನು ನಾವು ಕೇಂದ್ರ ಸರಕಾರಕ್ಕೆ ಕಟ್ಟುತ್ತಿದ್ದೇವೆ…ಕಟ್ಟು ನಿಟ್ಟಾಗಿ ತೆರಿಗೆ ವಸೂಲಿ ಮಾಡಲಾಗುವದೆಂದು ಮುಖ್ಯ ಮಂತ್ರಿಗಳು ಹೇಳಿದರು.
ಕೇಂದ್ರ ಸರಕಾರದಿಂದ ೫೦ ಸಾವಿರ ಕೋಟಿರೂಪಾಯಿ ಬರುವುದು ಬಾಕಿ ಇದೆ ಎಂದರು..ಐದು ವರ್ಷದಲ್ಲಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗಿವುದೆಂದರು..
ಆದ್ರೆ ಶಿಕ್ಷಕರ ವರ್ಗಾವಣೆ, ಓಪಿಎಸ್, ವೇತನ ಪರಿಷ್ಕರಣೆ ಯಾವುದೇ ವಿಷಯ ಚರ್ಚೆಗೆ ಬರಲಿಲ್ಲ..