ನಾ ಏಕಾಂಗಿ
ನಾ ಒಂಟಿಯಾಗಿ ಇರುವೆ
ಹಲವು ನೆನಪುಗಳ ನಡುವೆ
ಈ ನೆನಪು ಮರೆ ಮಾಚಿ
ನನ್ನ ಇನಿಯಳ ಸ್ಥಳದಲಿ
ಬೇರೊಂದು ಹೆಸರು ಮೂಡಿದಾಗ ಪ್ರತಿಭಟಿಸಿ ನಿಲ್ಲುವ
ನಾ ಏಕಾಂಗಿ
ಕರೆಯದೇ ಕೇಳದೇ ಪ್ರೀತಿಸದಾ
ಹೃದಯವು ತಾನಾಗಿ ನಿನ್ನ
ಹೆಸರಿರಬೇಕಾದ ಸ್ಥಳದಲಿ
ತನ್ನ ಹೆಸರನು ದುರುದ್ದೇಶಪೂರಿತ
ದೂರಾಲೋಚನೆಯಿಂದ ಮೂಡಿಸಲು ಪ್ರತಿಭಟಿಸಿ ರುವ ನಾ ಏಕಾಂಗಿ
ನೀ ಇರುವ ಈ ಹೃದಯವು
ಬೇರೆ ಮೋಸದ ಜಾಲಕೆ
ಸಿಲುಕದು ಗೆಳತೀ ನೀ ಎಲ್ಲೇ ಇರು
ಈ ಹೃದಯ ನಿನಗಾಗಿ ಮೀಸಲು
ಯಾರು ಏನೇ ಕುತಂತ್ರ ಮಾಡಲಿ
ಈ ಹೃದಯ ಜಗ್ಗದು ಬಗ್ಗದು
ನಿನ್ನ ನೆನಪಿನೊಳು ನಾ ಏಕಾಂಗಿ
ಎಷ್ಟು ಕುತಂತ್ರ ಜರುಗುತಿಹದು
ಈ ಮನದ ಸುತ್ತ ಮುತ್ತ
ಕುತಂತ್ರಿಗಳಿಗೆಂದೂ ಜಯವಾಗದು
ನಮ್ಮೀ ಪ್ರೀತಿ ಶಾಶ್ವತ ಅಮರ
ಯಾರೇನೇ ತಿಪ್ಪರಲಾಗ ಹಾಕಲಿ
ಈ ಮನ ಸೋಲದು
ಗೆಳತೀ ನೀ ನನ್ನ ಬಳಿ ಬರುವವರೆಗೆ ನಾ ಏಕಾಂಗಿ
ದುಷ್ಟ ಮನಸದು ನನ್ನ ಬಯಸಿಹುದು
ದುಷ್ಟತನದಿ ಏನೆಲ್ಲಾ ಕುತಂತ್ರ ಮಾಡುತಿಹುದು
ದುರುಳತನಕೆ ಮರುಳಾಗದ ಮನಸ್ಸಿದು
ಪ್ರೀತಿ ಸದಾ ಭಾವನೆಯ ನಂಟಿನೊಳಿಹುದು
ಆ ಭಾವನೆ ನಿನ್ನಲಿ ಮೂಡಿ ಹೃದಯವ ನೀಡಿರಲು
ಕುಟಿಲತೆಗೆ ಜಯವಾಗದು ಗೆಳತೀ ನೀ ಬರುವವರೆಗೆ ನಾ ಏಕಾಂಗಿ
ವೈ. ಬಿ. ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್ ಮುನವಳ್ಳಿ 591117
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
9449518400