ಧಾರವಾಡ:- ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್(ರಿ) ನ ಸಾರಥ್ಯವನ್ನು ವಹಿಸಿಕೊಂಡ ಡಾ||ಆರ್.ನಾರಾಯಣಸ್ವಾಮಿಚಿಂತಾಮಣಿ ರವರನ್ನು ಅವಿರೋಧವಾಗಿ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಧಾರವಾಡ ರಾಜ್ಯ ಘಟಕ, ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಸಂಗಮೇಶ ಖನ್ನಿನಾಯ್ಕರ ಅವಿರೋದವಾಗಿ ಆಯ್ಕೆಯಾಗಿದ್ದಾರೆ
ದಿನಾಂಕ 26 :04 :2023ರಂದು ತಿರುಗಿದ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ (ರಿ)ನ ಮೂರನೇ ರಾಜ್ಯ ಮಹಾ ಸಮ್ಮೇಳನವನ್ನು ಬುಧುವಾರ 11 ಗಂಟೆಗೆ ಟೀಚರ್ಸ್ ಸೊಸೈಟಿ ಕೊಪ್ಪದ ಕೇರಿ ಧಾರವಾಡದ ಸಭಾಭವನದಲ್ಲಿ ಪರಿಷತ್ನ ರಾಜ್ಯ ಕಾರ್ಯಕಾರಣಿ ಸಭೆಯನ್ನು ಕರೆಯಲಾಗಿತ್ತು ಸಭೆಯಲ್ಲಿ ರಾಜ್ಯ ಅಧ್ಯಕ್ಷರುಗಳು ಹಾಗೂ ರಾಜ್ಯಪ್ರಧಾನ ಕಾರ್ಯದರ್ಶಿಗಳು ಸೇರಿದ್ದರು. ಚರ್ಚಾ ವಿಷಯಗಳಲ್ಲಿ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ನ ರಾಜ್ಯ ಘಟಕವನ್ನು ಪುನರ್ ರಚನೆ ಮಾಡುವ ಬಗ್ಗೆ ಕಾರ್ಯಾಧ್ಯಕ್ಷರಾದ ಎಲ್ಲೈ ಲಕ್ಕಮ್ಮನವರ್ ವಿಚಾರ ಮಂಡಿಸುತ್ತಾ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ಗುರುತಿಗಡಿಯವರು ವಯೋ ನಿವೃತ್ತಿ ಹೊಂದಿದ್ದು ರಾಜ್ಯಾಧ್ಯಕ್ಷರ ಹುದ್ದೆ ಖಾಲಿ ಇದ್ದು ಈ ಜಾಗಕ್ಕೆ ವಿವಿಧ ಸಂಘಗಳಲ್ಲಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಸಂಘಟನಾ ಚತುರರಾಗಿರುವ ದಕ್ಷಿಣ ಕರ್ನಾಟಕದ ಪ್ರಭಾವಿ ನೇತಾರರಾದ ಡಾ|| ಆರ್.ನಾರಾಯಣಸ್ವಾಮಿ ಚಿಂತಾಮಣಿ ರವರನ್ನು ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ನ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸೂಚಿಸಿದರು ಪರಿಷತ್ನಸಹಕಾರ್ಯದರ್ಶಿಯಾದ ಮಲ್ಲಿಕಾರ್ಜುನ ಸಿ ಉಪ್ಪಿನ್ ಹಾಗೂ ರಾಜ್ಯ ಘಟಕದ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಶಂಕರಘಟ್ಟಿರವರು ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಉತ್ತರ ಕರ್ನಾಟಕ ಭಾಗದಿಂದ ವಿವಿಧ ಸಂಘಟನೆಗಳಲ್ಲಿ ಸಂಗಮೇಶ ದುಂಡಪ್ಪ ಕನ್ಯಕರ್ ರವರನ್ನು ಸೂಚಿಸಿದರು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಗುರುತಿಗಿಡಿರವರು ಹಾಗೂ ರಾಜ್ಯ ಘಟಕದ ಅನುಮೋದಿಸಿದರು ಸಭೆಯಲ್ಲಿ ಓಯೋ ನಿವೃತ್ತಿ ಪಡೆದ ಗುರುತಿಗಡಿ ರವರನ್ನು ಸನ್ಮಾನಿಸಲಾಯಿತು. ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ನ ಹುಟ್ಟು ಹಾಕಿರುವ ಉದ್ದೇಶಗಳು ಹಾಗೂ ನಿರ್ದಿಷ್ಟ ಗುರಿಗಳನ್ನು ಹಾಗೂ ಕಾರ್ಯ ಚಟುವಟಿಕೆಗಳನ್ನು ಸವಿವರವಾಗಿ ತಿಳಿಸಿದರು. ಬೆಂಗಳೂರಿನ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ ಉದ್ಘಾಟಿಸಿ ಮಾತನಾಡಿ ಪರಿಷತ್ನ ವೃಂದ ಸಂಘಗಳಿಗೆ ಹಾಗೂ ರಾಜ್ಯ ಘಟಕದ ಪದಾಧಿಕಾರಿಗಳಿಗೆ ಸ್ಪಷ್ಟಪಡಿಸಿದರು.
ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ ನ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಡಾ||ಆರ್.ನಾರಾಯಣಸ್ವಾಮಿ ಚಿಂತಾಮಣಿರವರು ಮಾತನಾಡುತ್ತಾ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ನ ರಾಜ್ಯ ಘಟಕದ ಸರ್ವ ಪದಾಧಿಕಾರಿಗಳು ನನ್ನ ಸಂಘಟನಾ ಚತುರಥಿಯನ್ನು ಗಮನಿಸಿ ನನಗೆ ರಾಜ್ಯಾಧ್ಯಕ್ಷರ ಹುದ್ದೆಯ ಜವಾಬ್ದಾರಿಯನ್ನು ನೀಡಿದ್ದು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ನಾನು ಯಾವುದೇ ಪರಿಷತ್ನ ಸದಸ್ಯ ಸಂಘಟನೆಗಳ ಜೊತೆಗೂಡಿ ಶಿಕ್ಷಕರ ಜ್ವಲಂತ ಸಮಸ್ಯೆಗಳನ್ನು ಒಂದೊಂದಾಗಿ ಪರಿಹರಿಸಲು ಶ್ರಮ ಪಡೋಣ ಎಂದು ಅಭಿಪ್ರಾಯಸಿದರು.
ಡಾ|| ಆರ್. ನಾರಾಯಣಸ್ವಾಮಿ ಚಿಂತಾಮಣಿ ಮಾತನಾಡುತ್ತಾ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ನ ರಾಜ್ಯಾಧ್ಯಕ್ಷರಾಗಿ ಶೈಕ್ಷಣಿಕ ಗುಣಮಟ್ಟ ಕಾಪಾಡುವಲ್ಲಿ ಶಿಕ್ಷಕರ ಸಂಘಗಳ ಪಾತ್ರ, ಎನ್ಇ ಪಿ, ಸಾಹಿತ್ಯ ಶಿಕ್ಷಣ ಆರೋಗ್ಯ ಪಾಠ ಟಿಪ್ಪಣಿ, ಪಾಠಯೋಜನೆಗಳ ಬಗ್ಗೆ ಕಾರ್ಯಗಾರಗಳು, NPS ತೊಲಗಿಸಿ -OPS ಜಾರಿಗೆ ತರಲು, ಪ್ರತಿ ವರ್ಷ ನಿಯಮಾನುಸಾರ ವರ್ಗಾವಣೆ ಪ್ರಕ್ರಿಯೆ ಮಾಡಲು, ಕ್ರಮವಾಗಿ DA ಜಾರಿ, ಗ್ರಾಮೀಣ ಬತ್ಯೆ, ಗ್ರಾಮೀಣ ಕೃಪಾoಕ ಸಮಸ್ಯೆ, OTS ವರ್ಗಾವಣೆ, ವೇತನ ಆಯೋಗ ಪರಿಷ್ಕರಣಿ, ಎಲ್ಲಾ HPSಗಳು ಡಿಜಿಟಲ್ ಶಾಲೆಗಳಾಗಿ ನಿರ್ಮಾಣ, ಕ್ಷೀರ ಭಾಗ್ಯ, ಅನುಷ್ಠಾನ ಅಕ್ಷರ ದಾಸೋಹ ವ್ಯವಸ್ಥಿತ ಅನುಷ್ಠಾನ, ಎಸ್ ಎಸ್ ಎಲ್ ಸಿ- ಪಿ ಯು ಸಿ ಮಕ್ಕಳಿಗೆ ಲ್ಯಾಪ್ಟಾಪ್, ಶಿಕ್ಷಕರ ಕಾರ್ಯಕ್ಷೇತ್ರಕ್ಕೆ MLC ಗೆ ಅವಕಾಶ, ಕನ್ನಡ ಶಾಲೆಗಳ ಉಳಿವಿಗಾಗಿ, ಮಕ್ಕಳಿಗೆ ಸರ್ಕಾರದಿಂದ ಲೇಖನಿ ಸಾಮಗ್ರಿಗಳ ವಿತರಣೆ, ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣೆಗಾಗಿ ಶಾಲೆಗಳಿಗೆ ಅನುದಾನ, ಶಾಲಾ ಅನುದಾನ ಹೆಚ್ಚಳ, ಸರ್ಕಾರದಿಂದ ಸಮಯಕ್ಕೆ ಸರಿಯಾಗಿ ಶಾಲಾ ಸವಲತ್ತುಗಳು, ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಪಹಾರ, ಪದವಿ ಪೂರ್ವ ಕಾಲೇಜಿನಲ್ಲಿ ಕ್ಯಾಂಟೀನ್ ನಿರ್ವಹಣೆ, ಶಿಕ್ಷಕರಿಗೆ ಆಗುವ ಅನ್ಯಾಯಗಳ ವಿರುದ್ಧ ಹೋರಾಟ ಸತ್ಯಾಗ್ರಹ, ಇಲಾಖೆಯ ಜೊತೆ ಸೌಹಾರ್ದ ಸಂಬಂಧ ಶಿಕ್ಷಣವೇ ಶಕ್ತಿ ಗುಣಮಟ್ಟದ ಸಮವಸ್ತ್ರಗಳ ವಿತರಣೆ ಮುಂತಾದ ಹತ್ತು ಹಲವಾರು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ ವೃಂದ ಸಂಘಗಳ ಸಹಕಾರ ಪಡೆದು ಈಡೇರಿಸಿಕೊಳ್ಳಲಾಗುವುದು ರಾಜ್ಯಾಧ್ಯಕ್ಷರಾದ ಡಾ|| ಆರ್. ನಾರಾಯಣಸ್ವಾಮಿ ಚಿಂತಾಮಣಿ ರವರು ಅಭಿಪ್ರಾಯಸಿದರು.
ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಸಂಗಮೇಶ ಖನ್ನಿನಾಯ್ಕರ್ ರವರು ಮಾತನಾಡುತ್ತಾ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ನ ಧಯೋದ್ದೇಶಗಳನ್ನು ಈಡೇರಿಸಲು ನಾನು ಅಧ್ಯಕ್ಷರೊಂದಿಗೆ ಜೊತೆಗೂಡಿ ವೃಂದಸಂಘಗಳ ಪದಾಧಿಕಾರಿಗಳ ಸಹಕಾರ ಪಡೆದು ಅಧ್ಯಕ್ಷರು ನುಡಿದ ವಿಚಾರಗಳನ್ನು ಗಮನದಲ್ಲಿಸಿಕೊಂಡು ಅವರ ಜೊತೆಗೂಡಿ ಜೋಡೆತ್ತುಗಳಂತೆ ಕಾರ್ಯನಿರ್ವಹಿಸಲು ಸದಾ ಸಿದ್ದನಾಗಿರುತ್ತೇನೆಂದು ನುಡಿದರು
ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ನ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಎಲ್ಲಾ ವೃಂದ ಸಂಘಗಳ ಪದಾಧಿಕಾರಿಗಳು ಗೌರವಾಧ್ಯಕ್ಷರಾದ ಗುರುತಿಗಡಿ, ಕಾರ್ಯಾಧ್ಯಕ್ಷರಾದ L.I.ಲಕ್ಕಮ್ಮನವರ್ ಸಹಕಾರಿದರ್ಶಿಯಾದ ಮಲ್ಲಿಕಾರ್ಜುನ ಸಿ ಉಪಿನ್, ಗುರುಪೋಳ ಕಿತ್ತೂರ,ಗೌಡ ರವರು ,ಮುಂತಾದವರು ಹಾಜರಿದ್ದು ಶುಭ ಹಾರೈಸಿದರು
🙏🙏🙏🙏🙏🙏🙏🙏🙏
ಡಾ ||R. ನಾರಾಯಣಸ್ವಾಮಿ ಚಿಂತಾಮಣಿ ರಾಜ್ಯಧ್ಯಕ್ಷರು
ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್(ರಿ)
ರಾಜ್ಯ ಘಟಕ :ಧಾರವಾಡ