ರಾಜ್ಯಕ್ಕೆ ಪ್ರಥಮ ಬಂದ ವಿದ್ಯಾರ್ಥಿನಿಗೆ ಸನ್ಮಾನಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ
ಸವದತ್ತಿ: ಇಂದು ಬಿಡುಗಡೆಯಾದ ಎಸ್. ಎಸ್. ಎಲ್. ಸಿ ಪರೀಕ್ಷೆ ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸವದತ್ತಿ ಯ ಕುಮಾರೇಶ್ವರ ಪ್ರೌಢಶಾಲಾ ವಿದ್ಯಾರ್ಥಿನಿಯಾದ ಅನುಪಮಾ ಶ್ರೀಶೈಲ ಹಿರೇಹೊಳಿ ಇವಳನ್ನು ಅವರ ಮನೆಗೆ ತೆರಳಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಶೈಲ ಕರೀಕಟ್ಟಿ ಸಿಹಿ ನೀಡುವ ಮೂಲಕ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಎಸ್. ಎಸ್. ಎಸ್. ಸಿ ನೋಡಲ್ ಅಧಿಕಾರಿಗಳಾದ ಎಂ. ಡಿ. ಹುದ್ದಾರ. ಸಂಯೋಜಕರಾದ ಜಿ. ಎಂ. ಕರಾಳೆ. ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.ಸದರಿ ವಿದ್ಯಾರ್ಥಿನಿಯ ಸಾಧನೆಯನ್ನು ಬಿ. ಆರ್. ಸಿಯ ಸಮನ್ವಯಾಧಿಕಾರಿಗಳಾದ ಬಿ. ಎನ್. ಬ್ಯಾಳಿ.ಸಂಪನ್ಮೂಲ ವ್ಯಕ್ತಿಗಳಾದ ರಾಜು ಭಜಂತ್ರಿ. ರತ್ನಾ ಸೇತಸನದಿ.ಡಾ.ಬಿ.ಐ.ಚಿನಗುಡಿ.ವೀರಯ್ಯ ಹಿರೇಮಠ. ಎಲ್. ಬಿ. ಬೆಟ್ಟದ. ಸಿ. ವ್ಹಿ.ಬಾರ್ಕಿ.ವೈ.ಬಿ.ಕಡಕೋಳ.ಸೇರಿದಂತೆ.ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್. ಆರ್. ಪೆಟ್ಲೂರ್ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಸುಧೀರ್ ವಾಘೇರಿ ಸೇರಿದಂತೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಅಭಿನಂದಿಸಿರುವರು