ಪ್ರೇಮ ಸಂಕೋಲೆ
ನಿನ್ನ ನಯನದ ಲವಲವಿಕೆ
ಸೆಳೆದ ನನ್ನ ಮನ ಕವಿಯಾಗಿ
ಗೀಚುತಿಹ ಕವನ
ಸದಾ ನಸು ನಗುತ ನಡೆಸುತಿರು
ಜೀವನವ ಪ್ರೀತಿ ತುಂಬಿದ ಅಧರದಲಿ
ನಯನ ನಯನಗಳ ಮಧುರ
ಮಿಲನವು ಪ್ರೀತಿ ಚಿಮ್ಮಿಸುತಿರಲಿ
ನಿನ್ನ ಜೊತೆ ಕಳೆದ ಪ್ರೀತಿಯ
ಸವಿ ಕ್ಷಣಗಳನು ಮರೆಯಲಾಗದು
ಗೆಳತೀ ಹೃದಯ ಹಾಡುತಿಹದು
ಸಪ್ತಸ್ವರವನು ಪ್ರೀತಿಯ ನೆನಪಲಿ
ಕಲ್ಪನೆಗೂ ಮೀರಿದ ನಮ್ಮ ಸ್ನೇಹ
ಪರಿವರ್ತನೆಯಾಗಿಹ ಪ್ರೀತಿಯ ಸಂಬಂಧ
ನಿರೀಕ್ಷೆ ಇರದ ಬದುಕಲಿ ಜೀವಸೆಲೆ
ಆಗಿ ಬಂದು ಹೃದಯದೊಳಿರುವೆ
ನನ್ನ ಮನ ನನ್ನ ಮಾತು ಕೇಳದು
ಪ್ರತಿ ದಿನ ಪ್ರತಿ ಕ್ಷಣ ನಿನ್ನ ನೆನಪಲಿಹುದು
ಗೆಳತಿ ನಿನಗೋಸ್ಕರ ನಾ ಬರೆಯುತಿರುವೆ
ಸಾಲು ಸಾಲು ಕವನಗಳ
ಪ್ರೀತಿಯ ಮಾತು ಮಾತುಗಳಲಿ
ದಿನಗಳೆಯುತಿರುವೆವು ವ್ಯಾಟ್ಸಪ್
ಸಂದೇಶಗಳೊಳು ಪೋನ್ ಕರೆಗಳೊಳು
ಹೊತ್ತು ಸಾಗುತಿಹದು ಪ್ರೇಮ ಗೀತೆಗಳೊಳು
ಕೇವಲ ಕಲ್ಪನೆಯಿಂದ ಕೂಡಿರದ ಜೀವನ
ಸದಾ ನೈಜತೆಯೊಳು ಸಾಗಲಿ ಪ್ರತಿದಿನ
ಅನುದಿನ ಅನುಕ್ಷಣ ಹೀಗೆ ಇರಲಿ
ಬಾಂಧವ್ಯ ಗಟ್ಟಿಯಾಗಲಿ ಪ್ರೇಮ ಸಂಕೋಲೆ
ವೈ.ಬಿ.ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
೯೪೪೫೧೮೪೦೦