ಪ್ರೀತಿ ಅಂದರೆ ಹೀಗೆನಾ.?
ಇಬ್ಬರು ವ್ಯಕ್ತಿಗಳು ಪರಸ್ಪರರ ಬಗ್ಗೆ ಸಾಕಷ್ಟು ಕಾಳಜಿ ವಹಿಸುವಾಗ, ಈ ಭಾವನೆಯು ಪೋಷಿಸುತ್ತದೆ. ಪ್ರೀತಿಯು ಭಾವನಾತ್ಮಕ, ದೈಹಿಕ ಮತ್ತು ಆಧ್ಯಾತ್ಮಿಕ ಬಂಧಗಳನ್ನು ಒಳಗೊಂಡಿರುತ್ತದೆ ಎಂದರೆ ತಪ್ಪಾಗುವುದಿಲ್ಲ.
ಈ ಪ್ರೀತಿಯು ಉಳಿದಿರುವುದೇ ನಂಬಿಕೆ, ತಿಳುವಳಿಕೆ ಮತ್ತು ಕಾಳಜಿಯ ಮೇಲೆ ಎಂದು ಹೇಳಬಹುದು.
ಒಬ್ಬ ವ್ಯಕ್ತಿಯು ಇನ್ನೊಬ್ಬರೊಡನೆ ಭಾವನಾತ್ಮಕ ಪ್ರೀತಿ ಹೊಂದಿದ್ದರೆ, ಆ ವ್ಯಕ್ತಿಯು ತನ್ನ ಮನಸ್ಸಿನಿಂದ ಅದನ್ನು ಅನುಭವಿಸುತ್ತಾನೆ. ಇದು ಅವರಿಗೆ ಸಂತೋಷ, ಕಣ್ಣೀರು, ಸಾಂತ್ವನ ತರುತ್ತದೆ ಮತ್ತು ಎಲ್ಲಾ ರೀತಿಯ ಭಾವನೆಗಳನ್ನು ಪ್ರೇರೇಪಿಸುತ್ತದೆ.
ಯುವ ಪ್ರೇಮಿಗಳು ಒಬ್ಬರಿಗೊಬ್ಬರು ಪರಸ್ಪರ ಕೈ ಹಿಡಕೊಂಡು ಅಲೌಕಿಕ ಆನಂದ ನೀಡುವಾಗ, ಅಲ್ಲಿ ಪರಿಪೂರ್ಣ ಭಾವನಾತ್ಮಕ ಸಂಬಂಧ ಏರ್ಪಡುತ್ತದೆ.ಅವರಿಬ್ಬರ ನಡುವೆ ಪ್ರತಿ ಕ್ಷಣವು ರೋಮಾಂಚಕ. ಎಷ್ಟು ಸಲ ಕೆನ್ನೆಯ ಚುಂಬಿಸುತ್ತಿದ್ದರೂ ಮತ್ತೆ ಮತ್ತೆ ಗಾಢವಾಗಿ ಆಲಿಂಗನವಾದಾಗ ತೊಡೆಯ ಮೇಲೆ ಮಲಗಿ ಚುಂಬನಕ್ಕೆ ತುಟಿಗಳು ಹವಣಿಸುತ್ತಿದ್ದ ಸಂದರ್ಭ ಪ್ರೇಮದ ಪರಾಕಾಷ್ಠೆ ತಲುಪಿರುವುದು.
ಓರ್ವ ಕವಿ ತನ್ನ ಕವನ ರಚಿಸಲು ತೊಡಗುತ್ತಿದ್ದರೆ ಅವನ ಪ್ರೇಮಿ ಆ ಕವಿತೆಗೆ ದನಿಯಾಗುತ್ತಿರುವಳೇನೋ ? ಇಲ್ಲಿ ಸಂಪ್ರದಾಯಗಳ ಬಂಧನವಿರುವುದು ದೇಹಕ್ಕೆ ಮಾತ್ರ. ಭಾವಕ್ಕೆ ಯಾವ ಬಂಧನವಿರಲು ಸಾಧ್ಯ?”
ಆ ಭಾವನೆಗಳನ್ನು ಅವಳು ಅವನಿಗೆ ತಂದಿರುವಳು ಕೂಡ. ಆಗ ಅವನು ಹೇಳುವ ಮಾತು “ ಎಷ್ಟು ಭಾವುಕಳು ನೀನು. ನೀ ಆಡುವ ಪ್ರತಿಯೊಂದು ಮಾತುಗಳನ್ನು ಕೇಳಬೇಕು. ನಿನ್ನ ಜೊತೆ ಬಹುಕಾಲ ಕಷ್ಟ ಸುಖ ಹಂಚಿಕೊಳ್ಳಲು ಅವಕಾಶ ಕೋರುವ ಈ ಮನವು ರಾಧಾಕೃಷ್ಣರ ಪ್ರೇಮ ನೆನೆಯುವುದು”. ಎಂದು ತನ್ನ ಭಾವನಾತ್ಮಕತೆಯನ್ನು ವ್ಯಕ್ತಪಡಿಸುವನು.
ಬದುಕೊಂದು ವಿಭ್ರಮೆ
ವಯಸ್ಸು ಅದನ್ನು ಮೀರಿ ಬೆಳೆಯುವ ಪರಿ
ಆ ಪರಿಧಿಯಲ್ಲಿ ಪ್ರೇಮ ಸಿಕ್ಕಾಗ
ಪ್ರೀತಿಯು ತನ್ನ ಭಾವುಕತೆಯ ಕ್ಷಣ ಕ್ಷಣಕ್ಕೂ ಅನುಭವಿಸುವ ಅನನ್ಯತೆ ಮರೆಯಲಾಗದು. ಜಗತ್ತನ್ನೇ ಮರೆತು ಬೇರೆ ಕಡೆ ಬದುಕಬೇಕು ಎಂದು ಹೃದಯವು ಹೇಳಿದಂತೆ. ನೈಜ ಜೀವನ ನೆನೆಯಲು ಇದು ಅಸಾಧ್ಯ. ಆದರೂ ಸಮಯ ಸಂದರ್ಭದಲ್ಲಿ ಅನುಕೂಲ ಮಾಡಿಕೊಂಡು ಬದುಕಬೇಕು.
ಭಾವನಾತ್ಮಕ ಪ್ರೀತಿಯಲ್ಲಿ, ಸಂಗಾತಿಯು ಕೇವಲ ದೈಹಿಕ ಅನ್ಯೋನ್ಯತೆ ಹೊಂದದೇ, ಮನಸ್ಸನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಬೆರೆತು ಮಾತುಕತೆ ಜರುಗುತ್ತಿರುತ್ತದೆ
ಮುಂದುವರಿದ ಹಾಗೆ ಪರಸ್ಪರ ದೈಹಿಕ ಪ್ರೀತಿಯಲ್ಲಿ ಒಳಗೊಂಡು ಸ್ಪರ್ಶವು ಪ್ರೀತಿ ಮತ್ತು ಆತ್ಮೀಯತೆ ವ್ಯಕ್ತಪಡಿಸುತ್ತದೆ. ಭದ್ರತೆಯ ಪ್ರಜ್ಞೆಯನ್ನು ಸಹ ಒದಗಿಸುತ್ತದೆ. ಈ ದೈಹಿಕ ಪ್ರೀತಿ ಹೆಚ್ಚಿನ ಸಂತೋಷವನ್ನು ಮತ್ತು ಹೆಚ್ಚು ಅಗತ್ಯವಿರುವ ಕಾಮ ಪ್ರಚೋದಕ ಸ್ಪರ್ಶ ನೀಡುತ್ತದೆ.
ಮುಂದೆ
ಆರೋಗ್ಯಕರ ಮತ್ತು ಪರಸ್ಪರ ಪ್ರೀತಿ ಸಂಭವಿಸುವಂತೆ ಬೆಳೆಯುತ್ತದೆ ಇದು ಇಬ್ಬರ ನಡುವೆ ಭಾವನಾತ್ಮಕ ಪ್ರಬುದ್ಧತೆ ಇದ್ದಾಗ ಮಾತ್ರ ಸಂಭವಿಸುತ್ತದೆ
ಅದು ಇಬ್ಬರಲ್ಲೂ ನಿಜವಾದ ಪ್ರೀತಿ ಇದ್ದಾಗ ಮಾತ್ರ, ಇಬ್ಬರ ಕಡೆಯಿಂದ ಸಂಪೂರ್ಣ ಶರಣಾಗತಿ ಇರುತ್ತದೆ. ಕ್ರಮೇಣವಾಗಿ ಒಬ್ಬರ ಸಂತೋಷವೇ ಇಬ್ಬರ ಸಂತೋಷ.ಎಂಬ ಭಾವನೆ ಮೂಡತೊಡಗುತ್ತದೆ. ಇಲ್ಲಿ ಇಬ್ಬರೂ ಬೆಳೆಯಲು ಮುಕ್ತರಾಗಿರುತ್ತಾರೆ.
ನಿಜವಾದ ಪ್ರೀತಿ ಕೆಲವು ಪ್ರತಿಕೂಲಗಳ ನಡುವೆಯೂ ಕಾಲಕ್ರಮೇಣ ಉಳಿಯುವ ಸಾಮರ್ಥ್ಯ ಹೊಂದಿದೆ.ಇಬ್ಬರೂ ಒಂದೇ ಎಂದು ತಮ್ಮ ಬದುಕಿನಲ್ಲಿ ಜರಗುವ ವೈಯುಕ್ತಿಕ ಘಟನೆ ಮತ್ತು ವೈಯುಕ್ತಿಕ ಜೀವನ ಜಂಜಾಟದಲ್ಲಿ ಪರಸ್ಪರ ಪ್ರೀತಿ ಮಾಡುವ ಸಂದರ್ಭ ನೋಡಿಕೊಂಡು ಸೇರುತ್ತಾರೆ. ಮತ್ತು ತಮ್ಮ ನೋವುಗಳನ್ನು ಪರಸ್ಪರ ಹೇಳುತ್ತಾ ತಾವು ಒಬ್ಬರನ್ನೊಬ್ಬರು ಸಂತೈಸಿ ಸಂತೋಷ ಕಾಣುತ್ತಾರೆ
ದಂಪತಿಗಳ ವಿಘಟನೆಯು ಬೇರೊಂದು ರೀತಿಯಲ್ಲಿ ಈ ಪ್ರೀತಿ ಪಡೆಯಲು ಪ್ರಯತ್ನ ಪಡುತ್ತದೆ. ತಮಗಿರುವ ನೋವು ಮತ್ತು ಹತಾಶೆಯ ಸ್ಥಿತಿಯನ್ನು ನಿವಾರಿಸಲು ಮತ್ತೊಂದು ರೀತಿಯ ಸಂಬಂಧವನ್ನು ಪ್ರಾರಂಭಿಸಲು ಆಯ್ಕೆ ಮಾಡುವ ಮೂಲಕ ಪ್ರೀತಿ ಪಡೆಯುವರು. ಇವರು ಈ ರೀತಿಯಲ್ಲಿ ತಮ್ಮ ನೋವನ್ನು ಮರೆಯಲು ಯತ್ನಿಸುವುದು ಕೂಡ ಪ್ರೀತಿಯ ಒಂದು ಹಂತವೆಂದು ಹೇಳಬಹುದು.
ಈ ರೀತಿಯ ವಿಘಟನೆಯನ್ನು ಅನುಭವಿಸಿದ ವ್ಯಕ್ತಿ ಅವನು ಒಂದು ನಿರ್ದಿಷ್ಟ ಯೋಗಕ್ಷೇಮವನ್ನು ಅನುಭವಿಸುವ ಯಾರನ್ನಾದರೂ ಹುಡುಕುತ್ತಾ ಮತ್ತು ತನ್ನ ಹಿಂದಿನ ವಿಘಟನೆಯಿಂದ ಉಂಟಾದ ದುಃಖ ಮರೆಯಲು ನಿರ್ದಿಷ್ಟ ದೈಹಿಕ ಆಕರ್ಷಣೆಯನ್ನು ಅನುಭವಿಸುವ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧವನ್ನು ಸ್ಥಾಪಿಸುವ ಮೂಲಕ ತನ್ನ ಮನದಾಳದ ಇಂಗಿತವನ್ನು ಪ್ರೀತಿ ಆತ್ಮೀಯತೆ ಮೂಲಕ ಸರಿಪಡಿಸಿಕೊಂಡು ಸುಖ ಕಾಣುವುದು ಕೂಡ ಪ್ರೀತಿಯ ಮತ್ತೊಂದು ಹಂತ ಎಂದೇ ಹೇಳಬಹುದು. ಇಲ್ಲಿ ಒಬ್ಬರಿಗೊಬ್ಬರು ಗೌಪ್ಯತೆಯನ್ನು ಉಳಿಸಿಕೊಳ್ಳುವರು ಕೂಡ.
ಪವಿತ್ರವಾದ ಪ್ರೇಮವೆಂದಾಗ ಮೊದಲು ನೆನಪಿಗೆ ಬರುವ ಜೋಡಿ ರಾಧೆ-ಕೃಷ್ಣ. ಎಲ್ಲಾ ಲೌಕಿಕ ಸುಖಗಳನ್ನು ಮೀರಿದ ಆಧ್ಯಾತ್ಮಕವಾದ ಪ್ರೇಮ ಅವರದ್ದು. ಪುರಾಣದಲ್ಲಿ ಕೃಷ್ಣನಿಗೆ ಹದಿನಾರು ಸಾವಿರ ಹೆಂಡತಿಯರು ಇದ್ದರು ಎಂಬ ಕತೆಯಿದೆ. ಆದರೆ ಕೃಷ್ಣನ ಪ್ರೇಯಸಿ ಅಂತ ಬಂದಾಗ ಅಲ್ಲಿ ರಾಧೆಗೆ ಮಾತ್ರ ಅಗ್ರ ಸ್ಥಾನ.
ಕೃಷ್ಣ, ರಾಧೆಯನ್ನು ತುಂಬಾ ಪ್ರೀತಿಸುತ್ತಿದ್ದ ಕೃಷ್ಣನ ಎಷ್ಟೋ ಕಾರ್ಯಗಳಿಗೆ ರಾಧೆ ಸ್ಪೂರ್ತಿಯಾಗಿದ್ದಳು, ತಾಳ್ಮೆ, ಭಕ್ತಿಗೆ ಮೀಸಲು. ಪ್ರೀತಿ-ಪ್ರೇಮ, ಪ್ರಣಯ ಜೋಡಿ ಎಂದು ಬಂದಾಗ ರಾಧಾ-ಕೃಷ್ಣರ ಪ್ರೀತಿ ಜಗತ್ತಿಗೆ ಮಾದರಿ.ಒಟ್ಟಾರೆ ಪ್ರೀತಿ ಪ್ರೇಮ ಎಂಬುದು ಎರಡು ದೇಹಗಳು ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಭಾವನೆಗಳನ್ನು ಹಂಚಿಕೊಳ್ಳುವ ಮೂಲಕ ಬದುಕನ್ನು ನಡೆಸುವುದಾಗಿದೆ.ಇಲ್ಲಿ ಮೋಸ ವಂಚನೆ ಕಪಟ ಇತ್ಯಾದಿಗಳು ಬರಲಾರವು. ಮತ್ತು ಬರಬಾರದು. ಜೊತೆಗೆ ಕೇವಲ ಕಲ್ಪನೆಯಲ್ಲಿ ಕಾಲ ಕಳೆಯವದೇ ವಾಸ್ತವ ಬದುಕಿಗೂ ಕೂಡ ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಾಗ ಮಾತ್ರ ಪ್ರೀತಿಗೆ ಅರ್ಥ ಬರುವುದು.
ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
೯೪೪೯೫೧೮೪೦೦