ಭಗವಾನ್ ಬುದ್ಧ ಪೂರ್ಣಿಮೆ ದಿನ.
ಭಗವಾನ್ ಬುದ್ದರಿಗೆ ಜ್ಞಾನೋದ ಯವಾದ ದಿನ.
ನಿರ್ವಾಣ ಹೊಂದಿದ ದಿನ.
ಏಪ್ರಿಲ್ ಮೇ ತಿಂಗಳ ಪವಿತ್ರ ದಿನ.
ಕಪಿಲವಸ್ತುವಿನಲ್ಲಿ ಜನನ. ತಾಯಿ ಮಾಯಾದೇವಿ ತಂದೆ ಶು ದ್ಧೋ ದನ.
ಕ್ರಿಸ್ತಪೂರ್ವ 557 ,447 ರ ನಡುವೆ
ಸಿದ್ಧಾ ರ್ಥ ಅವರ ಜೀವನ.
ಇವರ ಜಾತಕದ ಪ್ರಕಾರ ಇವರೊಬ್ಬ ಯೋಗಿ ಅಥವಾ ಚಕ್ರವರ್ತಿ ಎಂಬ ಪರಿಕಲ್ಪನ.
ಇದನ್ನರಿತು ತಂದೆ, ತಾಯಿ
ಪಾಲಿಸಿದರು ಪೋಸಿಸಿದರು
ಮಾಡಿ ಶ್ರೀಮಂತ ಚಿಂತನ.
ಕಷ್ಟ ಕಾರ್ಪಣ್ಯ ಗಳು ಗೊತ್ತಾಗದಂತೆ
ಮಾಡಿದರು ಜತನ.
ಭಯವಿತ್ತು ಅವರಿಗೆ ಯೋಗಿಯಾಗ ಬಹುದೆಂಬ ಭಯದ ಭಾವನ.
ಅರಮನೆಯನ್ನೇ ಮಾಡಿದರು
ಸರ್ವ ವ್ಯವಸ್ಥೆಯ ಅದ್ಭುತ ತಾಣ.
ಹೊರಟರು ಒಂದು ದಿನ ಸೇವಕನ ಜೊತೆ ಹೊರ ಪ್ರಯಾಣ.
ಕಣ್ಣಿಗೆ ಬಿತ್ತು ನರಳುವ ವಯೋವೃದ್ಧನ ರೋಧನ.
ಮತ್ತೆ ದಾರಿಯಲ್ಲಿ ನೋ ಡಿದರು
ಹೊತ್ತು ಕೊಂಡು ಹೋಗುತ್ತಿರುವ ಶ ವಾನ.
ಅದುವೇ ಆಯಿತು ಅವರ ಯೋ ಚನಾ ಪರಿಧಿಯ ಬದಲಾವಣೆಗೆ ಪ್ರೆರಣ.
ತ್ಯಜಿಸಿದರು ರಾತ್ರೋ ರಾತ್ರಿ
ಅರಸೊತ್ತಿಗೆ ಸುಂದರ ಹೆಂಡತಿ ಮಕ್ಕಳನ್ನ.
ತೆಗೆದುಕೊಂಡರು ಲೋಕಸಂಚಾರದ
ನಿರ್ಧಾರವನ್ನ.
ಮಾಡಿದರು ನೊಂದವರಿಗೆ
ಭರವಸೆಯ ಚಿಂತನ.
ಪ್ರಸ್ತುತ ಪ್ರಕ್ಷುಬ್ದ ವಾತಾವರಣದಲ್ಲಿ
ಬೇಕು ಇವರ ಭೋಧನ.
ಇಂದಿಗೂ ಅವರ ಆಚಾರ, ವಿಚಾರಗಳು ಪ್ರಧಾನ.
ಪಾಲಿಸಿರಿ ಕೇಳಿರಿ ಅವರ
ಪ್ರೀತಿಯ ಅಶಾರಹಿತ ಅ ಹಿಂಶೆಯ
ಕಥೆ, ಭೋಧನೆಗಳನ್ನ.
ಇವುಗಳಲ್ಲಿ ಇದೆ ನಿಜ ಪ್ರೀತಿಯ ಅಂತಃ ಕರಣ.
ಸರ್ವರಿಗೂ ಬುದ್ಧ ಪೂರ್ಣಿಮೆಯ ಹಾರ್ಧಿಕ ಶುಭಾಶಯಗಳು..
ಉಮಾದೇವಿ. ಯು. ತೋಟಗಿ.
ಬೈಲ್ ಹೊಂಗಲ್. ಸ .ಶಿ.