ಪಟಿಯಾಲ ದಲ್ಲಿಬಸವ ತತ್ವ ಅನುಷ್ಠಾನ
ಪಟಿಯಾಲ(ಪಂಜಾಬ್): ನೇತಾಜಿ ಸುಭಾಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ( ಎನ್ಐಎಸ್ ) , ಇದು ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್ಎಐ) ಶೈಕ್ಷಣಿಕ ವಿಭಾಗವಾಗಿದೆ ಮತ್ತು ಪಟಿಯಾಲ ನಗರದಲ್ಲಿ ನೆಲೆಗೊಂಡಿರುವ ಏಷ್ಯಾದ ಅತಿದೊಡ್ಡ ಕ್ರೀಡಾ ಸಂಸ್ಥೆಯಾಗಿದೆ .ಇದು 268 ಎಕರೆ ಪ್ರದೇಶವನ್ನು ಒಳಗೊಂಡ ಸಂಸ್ಥೆ.ಇಲ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯೋಗಪಟು ಕಾರ್ತಿಕ ಬೆಲ್ಲದ ಅಧ್ಯಯನ ಮಾಡುತ್ತಿದ್ದು. ಬಸವ ತತ್ತ್ವವನ್ನು ತನ್ನ ಕಾಲೇಜಿನಲ್ಲಿ ಅನುಷ್ಠಾನ ಗೊಳಿಸಲು ಡಿಪ್ಲೊಮಾ ಇನ್ ಸ್ಪೋರ್ಟ್ಸ್ ಯೋಗಾ ಕೋಚಿಂಗ್ ನ 60 ನೇ ಬ್ಯಾಚಿನ ಮುಕ್ತಾಯ ಸಮಾರಂಭದಲ್ಲಿ ಬಸವಣ್ಣನವರ ಮೂರ್ತಿ ನೀಡುವ ಜೊತೆಗೆ ಅವರ ತತ್ವಗಳನ್ನು ಸಾರುವ ಪ್ರಯತ್ನ ಜರುಗಿಸಿದ್ದು ಶ್ಲಾಘನೀಯ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೋಗಾ ಕೋಚ್ ಮುಖ್ಯಸ್ಥರಾದ ಸಿ. ಕೆ. ಮಿಶ್ರಾ ವಹಿಸಿದ್ದರು. ಅತಿಥಿಗಳಾಗಿ ಜೈಪುರ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ರಾದ ಡಾ. ರಮಾಕಾಂತ್ ಮಿಶ್ರಾ. ಉಪಸ್ಥಿತಿರಿದ್ದರು.
ಈ ಕಾರ್ಯಕ್ರಮದಲ್ಲಿ ಸಿ. ಕೆ. ಮಿಶ್ರಾ ಕಾರ್ತಿಕ ಬೆಲ್ಲದ ನೇತೃತ್ವದಲ್ಲಿ ಬಸವಣ್ಣನವರ ಮೂರ್ತಿ ನೀಡಿ ಸನ್ಮಾನಿಸಲಾಯಿತು. ಬಸವಣ್ಣನವರ ಕುರಿತು ಕಾರ್ತಿಕ ಬೆಲ್ಲದ ಪ್ರಾಸ್ತಾವಿಕವಾಗಿ ಮಾತನಾಡಿದನು. ಸ್ವಾಗತ ಮತ್ತು ಪರಿಚಯವನ್ನು ಚೇತನ್ ಮಾಡಿದರು. ನಿಕ್ಕಿ ನವನೀತ ಸಂಗಡಿಗರು ಪ್ರಾರ್ಥನೆ ಗೀತೆ ಹೇಳಿದರು. ಪುಷ್ಪಾರ್ಪಣೆಯನ್ನು ಉತ್ತರ ಪ್ರದೇಶದ ಅಖಿಲೇಶ್ ಕುಮಾರ್ ನೆರವೇರಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿ. ಕೆ. ಮಿಶ್ರಾ ಅವರು ನಾಡು ಕಂಡ ಮಹಾ ದಾರ್ಶನಿಕ ಬಸವಣ್ಣನವರು ಅವರ ವಚನ ಸಾಹಿತ್ಯ ಜೀವನ ಮೌಲ್ಯಗಳನ್ನು ತಿಳಿಸುತ್ತದೆ. ಈ ಮೂರ್ತಿ ಯನ್ನು ಯೋಗಾ ಡಿಪಾರ್ಟ್ಮೆಂಟ್ ನಲ್ಲಿ ಇಡಲಾಗುವುದು. ಎಲ್ಲರೂ ಬಸವಣ್ಣನವರ ಆದರ್ಶ ಜೀವನ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುವುದು ಎಂದು ಹೇಳಿದರು. ಸಹಾಯಕ ಪ್ರಾಧ್ಯಾಪಕ ರಾದ ಡಾ. ರಮಾಕಾಂತ್ ಮಿಶ್ರಾ. ಮಾತನಾಡಿ ಯೋಗದ ಮಹತ್ವದ ಕುರಿತು ತಿಳಿಸಿದರು. ವಿವಿಧ ರಾಜ್ಯದ ಯೋಗಾ ಕೋಚ್ ಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಕಾಸ ಸೇನಿ ವಂದಿಸಿದರು.ಕಾರ್ತಿಕ ಬೆಲ್ಲದ ಕಾರ್ಯ ಕ್ರಮವನ್ನು ನಿರೂಪಿಸಿದರು.