ಜ್ಞಾನದ ಬೆಳಕು
ಬುದ್ಧ ಪೂರ್ಣಿಮೆ ಬುದ್ಧ ಪೂರ್ಣಿಮೆ
ನಮ್ಮ ಜೀವನದ ಜ್ನಾನ ಬೆಳಕು ಬುದ್ಧ ಪೂರ್ಣಿಮೆ
ಮಾನವೀಯತೆ ಶಾಂತಿ ಸಂದೇಶದ ಬುದ್ಧ ಪೂರ್ಣಿಮೆ
ಮಂದಸ್ಮಿತ ವದನ ಸಾಕಾರ ಮೂರ್ತಿ
ಕರುಣಾಮಯಿ ಸತ್ಯ ಬೋಧಕ
ಶಾಂತಿ ಸ್ಥಾಪಕ ಬುದ್ಧ
ಅರಸೊತ್ತಿಗೆಯ ತ್ಯಜಿಸಿ
ಬದುಕಿನ ಶಾಂತಿ ನೆಮ್ಮದಿ ಅರಸಿ ಬುದ್ಧನಾದ
ಜಗಕೆ ದಾರಿದೀಪವಾದ ಮಹಾನ್ ಚೇತನ
ಅಧ್ಯಾತ್ಮಿಕ ಪುರುಷ ಅಹಿಂಸಾ ತತ್ವ ಬೋಧಕ
ಮುದುಕ ಶವ ಕಂಡ ಕ್ಷಣ ಮರುಕ
ಜೀವನ ನಶ್ವರ ತತ್ವ ಅರುಹಿ
ಲೋಕ ಸಂಚಾರಗೈದ ಜ್ಞಾನ ದೀಪಕ
ಲುಂಬಿನಿವನದಿ ಜ್ಞಾನ ಬೆಳಕು ಕಂಡ ಸಾಧಕ
ಲೋಕಕಲ್ಯಾಣಾರ್ಥ ಸಂಚಾರಿ ಯಾಗಿ ಜೀವನಮಾರ್ಗ ಬೋಧಕ
ಜೀವನ ನಶ್ವರ. ಸತ್ಯ ಶಾಶ್ವತ
ಮನುಕುಲದ ಧರ್ಮದ ಅನುಪಾಲಕ
ಬೌದ್ಧ ಧರ್ಮದ ಸ್ಥಾಪಕ
ಸದ್ಭಾವನೆ, ಸತ್ಸಂಕಲ್ಪ, ಸದ್ವಚನ, ಸದ್ವರ್ತನೆ, ಸತ್ಶುದ್ಧಿ, ಸದಾಲೋಚನೆ, ಸದಾಂತರ್ಯ ಮತ್ತು ಸದಾಮೋದ ಎಂಬ ಎಂಟು ಸನ್ಮಾರ್ಗಗಳ ಪಾಲಕ
ಜನರಿಗೆ ಸದ್ಭಾವನಾ ಬದುಕ ತಿಳಿಸಿದ ಜ್ಞಾನದಾತ
ಪ್ರಾಣಿ ಹಿಂಸೆ, ನರಬಲಿ, ವರ್ಜಿಸಿದ ಅಹಿಂಸಾ ತತ್ವ ಪರಿಪಾಲಕ
ಪ್ರಾಣಿಗಳಿಗೂ ಜೀವವಿದೆ
ಜೀವ ತೆಗೆಯುವ ಹಕ್ಕು ನಮಗಿಲ್ಲ ಎಂದು ಸಂದೇಶ ಸಾರುತಲಿ ಪ್ರಾಣಿಗಳ ಪ್ರೀತಿಸಿ ಎಂದು ಸಾರಿದ ಜೀವಸಖ
ಹುಟ್ಟಿದ ದಿನವೂ ಒಂದೇ
ಜ್ಞಾನೋದಯವಾದ ದಿನವೂ ಒಂದೇ
ದ್ವೇಷ ಅಸೂಯೆ ನಿರ್ನಾಮ ಮಾಡಲು ಕರೆ ನೀಡಿ
ನೊಂದವರ ಬಾಳಿಗೆ ಬೆಳಕಾಗಿ
ಪ್ರೀತಿ ಚಿಲುಮೆಯ ಉಕ್ಕಿಸಿ
ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳದಿರಿ ಎಂದು ಅರುಹಿ
ನಿಜ ಪ್ರೀತಿಯ ಅಂತಃಕರಣದ
ಬೋಧಕ
ವೈ. ಬಿ. ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ-೫೯೧೧೧೭
ಸವದತ್ತಿ ತಾಲೂಕು
ಬೆಳಗಾವಿ ಜಿಲ್ಲೆ
೯೪೪೯೫೧೮೪೦೦