ಮನಸು ತೆರೆದುಕೋ
ಮನಸು ತೆರೆದುಕೋ
ನಿನ್ನ ನೆನಪುಗಳನು
ಹದ ಮಾಡಿಕೋ
ನಾ ಬಂದು ನಿನ್ನ ಅಪ್ಪುವ ಮುನ್ನ
ನೀ ಗಾಢ ಮೌನಕ್ಕೆ ಜಾರಿದಾಗೆಲ್ಲ
ನನ್ನನ್ನು ಕಾಡುವಂತೆ ಭಾಸವಾಗುತ್ತದೆ
ನಿನ್ನ ಕಂಡೊಡನೆ ತೆರೆದುಕೊಳ್ಳುವ
ಹೃದಯ
ಈಗೀಗ ನಿನ್ನ ನೆನಪುಗಳು
ಮೌನದ ತುದಿಯಲ್ಲಿ ಕವಿತೆಯೊಂದನು
ಗೀಚುತಿರುವೆ.
ನಾನು ನನ್ನವಳು ಎಂದು ಪ್ರಾರಂಭಿಸುವ
ಈ ಕವನ ಅಲ್ಲಿ ನೀನು.. ಇಲ್ಲಿ ನಾನು
ಚಡಪಡಿಸುತ್ತಾ ಸದ್ದಿಲ್ಲದೆ
ದಿಟ್ಟಿಸುತ್ತಿದ್ದೇನೆ ವಿವಶನಾಗಿ..
ಇನ್ನೂ ಒಂದು ಜನ್ಮವಿರುವುದಾದರೆ
ಹಗಲಿರುಳೆನ್ನದೆ
ನಿನ್ನ ಕೆನ್ನೆಯ ಚುಂಬಿಸೋ ಬಯಕೆ
ಆ ನಿನ್ನ ಕಣ್ಣಂಚಿನ ಕುಡಿ
ನೋಟಕು ನಿನ್ನಯ ಗಾಢ ಮೌನಕೂ
ಏನೋ ಹೇಳಕ್ಕಿದೆಯಂತೆ
ನಿನ್ನ ಮಂದಹಾಸದಲ್ಲಿ
ಮೊಗೆದು ನಗುವ
ಆ ನಿನ್ನ ನೋಟದೊಳು
ಸೋತಿರುವೆ.
ನಾಳೆಗಳಿಗೆ ದೃಷ್ಟಿ ನೆಟ್ಟು
ನಾ ನಿನ್ನ ಕಂಡಾಗಲೇ
ಹೃದಯ ಜಾರಿದ್ದು ಮನಸು ಮಗುವಾಗಿ
ನಿನ್ನನೇ ಬೇಡಿದ್ದು…ಈಗ ಬರೀ ನೆನಪು
ನಿನ್ನ ನೆನಪಿನಿಂದ ಹುಟ್ಟಿದ ಈ
ಕವನ ನಿನ್ನೊಲುಮೆಯ
ರಾಗವನ್ನು ಪದಗಳಲ್ಲಿ
ಕಟ್ಟಿ ಹಾಕುವ ವ್ಯರ್ಥ ಪ್ರಯತ್ನ
ಪದೇ ಪದೇ ನೆನಪಾಗುತಿರುವೆ ನಲ್ಲೆ
ಏನು ಹೇಳಲಿ ಈ ವಿರಹದುರಿಗೆ
ಪ್ರತಿ ದಿನ ಪ್ರತಿ ಕ್ಷಣಗಳು
ನಿನಗಾಗಿ ನಾನು ಮೀಸಲಿಟ್ಟದ್ದು
ಈಗ ನನ್ನ ಜೀವನವಾಗಿಹದು
ನಿನ್ನ ನೆನಪಾದ ಹೊತ್ತು
ಪ್ರೀತಿಸಲು ಅದೆಷ್ಟೂ ನೆನಪುಗಳು.
ಮೊಬೈಲ್ ಚಾಟಿಂಗ್ನಲ್ಲೂ,
ನನ್ನೊಳಗಿನ ತುಮುಲ,
ಹೊಯ್ದಾಟ
ಪ್ರೀತಿಯೆಂದರೆ ಹೀಗೇನ
ಕ್ಷಣ ಹೊತ್ತು ಅಣಿಮುತ್ತು
ಸದಾ ನಿನ್ನ ನೆನಪಲಿ ಬೆಂದಿರುವೆ
ಬಾ ನನ್ನ ಸೇರು ಸಂತೈಸು
ನಿನ್ನೆ ಎದೆಯಾಳದಿ ಹುದುಗಿ
ಹೋಗಿ ಬರಸೆಳೆದು ಅಪ್ಪುವೆ
ಬಾ ಸೇರು ನನ್ನನು
ವೈ.ಬಿ.ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ.ಸಿಂದೋಗಿ ಕ್ರಾಸ
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
೯೪೪೯೫೧೮೪೦೦
೮೯೭೧೧೧೭೪೪೨