ಕನಸುಗಳ ಕನವರಿಕೆ
ನೀನಿಲ್ಲದ ಪ್ರತಿಕ್ಷಣ
ಏನೋ ಕಳೆದು ಹೋದ ಅನುಭವ ಏನಾದರೂ
ಮಾತನಾಡಲು ಬಯಸುತಿಹ ಈ ಮನ ಮೌನದೊಳು ಜಾರಿಹದು
ಮನದ ಸೂರಿನಡಿ ಮನಸೂರೆಗೊಳ್ಳುವ
ನಿನ್ನ ನೆನೆಯುತಲಿ ದಿನಗಳೆಯುತಿರುವ ಪ್ರೇಮಿ ನಾನು
ನೀ ನಿಲ್ಲದೇ ಸುಖ ಮರೀಚಿಕೆ ಆಗಿಹುದು
ನೀ ಮಲಗಿ ಮುತ್ತಿಟ್ಟ ಎದೆಯು ನಿನ್ನ ನೆನಪಲಿಹುದು
ಎದೆಯಲಿ ಅಂತ್ಯವಿಲ್ಲದ ನೋವಿನಲ್ಲಿ
ನೀನಿಲ್ಲದ ದಿನ ಚಂದ್ರನಿರದ ಹುಣ್ಣುಮೆಯ ತೆರದಿ
ಜೀವನ ಸಂತೆಯಲ್ಲಿ ಇಷ್ಟಗಳು ಕಳೆದು ಹೋದಂತೆ ಭಾವ
ಮನಸಾರೆ ನಿನ್ನೊಲವ ಸಿಹಿ ಬೇಕಾಗಿದೆ ಈ ಮನಕೆ
ಕಣ್ಣೋಟದ ನೋಟವ ಹಗಲಿರುಳು ನೆನೆದು ಕನಸುಗಳ ಕನವರಿಕೆ
ನೀನು ತಿಳಿದಿರೊದು ನನಗೆ ಈಗೀಗ,
ಆದರೆ ನನ್ನ ಮನಕೆ ಈಗ ನೀನೇ ಎಲ್ಲಾ..
ಉಕ್ಕಿದಂತೆ ಮನದ ಕಡಲು ಗೆಳತಿ, ಅತಿಯಾಗಿ ನಿನ್ನ ನೆನಪು||
ಎನೋ ಒಂಥರ ಮನಸಿಗೆ ಹರುಷ ನಿನ್ನ ಕಂಡಾಗ
ದೂರವಿದ್ದರೂ ಮನದ ಪ್ರೀತಿಯ ಒಡಲಲ್ಲಿ ನೀ ನನ್ನೊಳಗೆ
ಇರಲು ದಿನಕೊಂದು ಸಲವಾದರೂ ಸೇರಬೇಕು ಎಂಬ ಮನೋಭಾವ
ಮಾಡುತ ಪದೆ ಪದೆ ನಿನ್ನ ನೆನಪ, ಪ್ರೀತಿ ಅನುಭವಿಸುತ್ತಿದೆ ನಿನ್ನ ಸೌಂದರ್ಯ ದ ಸೊಗಸ
ಕೂಡಿ ಬಾಳಬೇಕು ಎಂದು ಹಂಬಲಿಸುತ್ತಿದೆ ಅರಳುವುದು ಪ್ರೇಮ ಕವನ ದಿನ ಕ್ಷಣಗಳು
ಬರಬಾರದೇ ಬೇಗ ನೀ ನನ್ನ ಸೇರಲು.
ವೈ. ಬಿ. ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್ ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ
೯೪೪೯೫೧೮೪೦೦