ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಅವೈಜ್ಞಾನಿಕವಾಗಿದ್ದು, ಜೆಷ್ಠತಾ ಪಟ್ಟಿಯಲ್ಲಿ ಲೋಪದೋಷಗಳ ಕುರಿತು ಮನವರಿಕೆ..ಕೌನ್ಸಲಿಂಗ್ ಮೂಂದೂಡಿಕೆ.
ಇಂಡಿ: ಇಂದು ನಡೆಯಬೇಕಾಗಿದ್ದ ಹೆಚ್ಚುವರಿ ಮುಖ್ಯಗುರುಗಳ ಹಾಗೂ ಸಹ ಶಿಕ್ಷಕರ ಜೇಷ್ಠತಾ ಪಟ್ಟಿಯಲ್ಲಿ ಹಲವು ಲೋಪದೋಷಗಳು ಇದ್ದ ಪ್ರಯುಕ್ತ ಪ್ರಯುಕ್ತ ಬಹಳಷ್ಟು ಶಿಕ್ಷಕರಿಗೆ ಅನ್ಯಾಯವಾಗುತ್ತೆ ಅಂತ ಮಾನ್ಯ ಉಪನಿರ್ದೇಶಕರಿಗೆ ಮನವರಿಕೆ ಮಾಡಿ ಅವೈಜ್ಞಾನಿಕ ಕೌನ್ಸಲಿಂಗ ನಡೆಸಬಾರದು ಎಂದು ನಮ್ಮ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಮಾಡಿಕೊಂಡಾಗ ಮಾನ್ಯ ಉಪನಿರ್ದೇಶಕರು ಸಕಾರಾತ್ಮಕವಾಗಿ ಸ್ಪಂದಿಸಿ ಹೆಚ್ಚುವರಿ ಕೌನ್ಸಲಿಂಗನ್ನು ಮಾನ್ಯ ಆಯುಕ್ತರ ಆದೇಶದ ಮೇರೆಗೆ ತಾತ್ಕಾಲಿಕವಾಗಿ ಮೂ೦ದೂಡಲಾಯಿತು.
ಹೆಚ್ಚುವರಿ ಶಿಕ್ಷಕರ ಪರವಾಗಿ ಧ್ವನಿ ಎತ್ತಿ ಮಾತಾನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು/ಕಾರ್ಯದರ್ಶಿಗಳು, ನೌಕರರ ಸಂಘದ ಅಧ್ಯಕ್ಷರು ಹಾಗೂ ಖಜಾನಚಿಗಳು, ವಿವಿಧ ತಾಲೂಕಿನ ಎಲ್ಲ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ತುಂಬುಹೃದಯದ ಅಭಿನಂದನೆಗಳು.
ಮುಂದೆ ನಡೆಯುವ ಹೆಚ್ಚುವರಿ ಕೌನ್ಸಲಿಂಗಲ್ಲಿ ಯಾವುದ ಶಿಕ್ಷಕರಿಗೆ ಅನ್ಯಾಯವಾಗದ ಹಾಗೆ ಸರಿಯಾಗಿ ಆದ್ಯತೆಯ ಪ್ರಕಾರ ಜೇಷ್ಠತಾ ಪತ್ತಿ ಬಿಡುಗಡೆ ಮಾಡಿ ಅದನ್ನು ಪರಿಶೀಲಿಸಲು ಸ್ವಲ್ಪ ಕಾಲವಕಾಶ ಕೊಟ್ಟು ಹೆಚ್ಚುವರಿ ಕೌನ್ಸಲಿಂಗ ಮಾಡಲು ಪ್ರಯತ್ನ ಮಾಡಬೇಕೆಂದು ನಾನು ಜಿಲ್ಲಾ ಪ್ರಾಥಮಿಕಶಾಲಾ ಶಿಕ್ಷಕರ ಸಂಘ ಹಾಗೂ ನೌಕರರ ಸಂಘಕ್ಕೆ ಮನವಿ ಮಾಡಿಕೊಳ್ಳುತ್ತೇನೆ.
ಇಂದ,. ಆನಂದ ಭೀ ಕೆಂಭಾವಿ ನಿರ್ದೇಶಕರು KSPSTA