ಬೆಂಗಳೂರು : ಶಿಕ್ಷಣ ಇಲಾಖೆಯ ಆಯುಕ್ತರು ಶಿಕ್ಷಕರ ಕೌನ್ಸಲಿಂಗ್ ಪ್ರಕ್ರಿಯೆ ಮಾಡಿಯೇ ತಿರುತ್ತೇವೆ ಎಂದು ಹಟಕ್ಕೆ ಬಿದ್ದಂತೆ ಇವತ್ತು ಕೌನ್ಸಲಿಂಗ್ ಪ್ರಕ್ರಿಯೆ ಆರಂಭಿಸಿದ್ದರು.ಕೊನೆಗೂ ನೀರಿಕ್ಷೆಯಂತೆ ಶಿಕ್ಷಕರ ಕೌನ್ಸಲಿಂಗ್ ಮುಂದಿನ ಆದೇಶದವರೆಗೂ ಮೂಂದುಡಲಾಗಿದೆ..
ದಿನಾಂಕ: 24.01.2023ರಂದು “ಕೌನ್ಸಿಲಿಂಗ್ ಮುಖಾಂತರ ಹೆಚ್ಚುವರಿ ಶಿಕ್ಷಕರುಗಳಿಗೆ” ಸ್ಥಳ ನಿಯುಕ್ತಿಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದ್ದು, ಸದರಿ ಪ್ರಕ್ರಿಯೆಯಲ್ಲಿ ತಾಂತ್ರಿಕ ಹೆಚ್ಚುವರಿ ಶಿಕ್ಷಕರುಗಳ ಪಟ್ಟಿಯಲ್ಲಿ ನ್ಯೂನತೆಗಳಿದ್ದರೂ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಸುತ್ತಿರುವುದು ನನ್ನ ಗಮನಕ್ಕೆ ಬಂದಿರುತ್ತದೆ.
ಈ ಹಿನ್ನೆಲೆಯಲ್ಲಿ ಸದರಿ “ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಕೂಡಲೇ ತಡೆಹಿಡಿಯುವಂತೆ ಮತ್ತು ಇಂದಿನ ದಿನದ ಎಲ್ಲಾ ಪ್ರಕ್ರಿಯೆಯನ್ನು ರದ್ದುಪಡಿಸಲು ಕ್ರಮವಹಿಸುವುದು. ಮುಂದಿನ ಕೌನ್ಸಿಲಿಂಗ್ ಪ್ರಕ್ರಿಯೆ ಕುರಿತು ಪ್ರಸ್ತಾವನೆಯನ್ನು ಆದ್ಯತೆ ಮೇರೆಗೆ ಕಡತದಲ್ಲಿ ಮಂಡಿಸಲು ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ಟಿಪ್ಪಣಿ ಮುಖಾಂತರ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾದ್ಯಕ್ಷರಾದ ಸಿ.ಎಸ್.ಷಡಕ್ಷರಿಯವರು ಪಬ್ಲಿಕಟುಡೆಯೊಂದಿಗೆ ಮಾತನಾಡಿ, ಶಿಕ್ಷಕರಿಗೆ ಎದರಾಗುತ್ತಿರುವ ಸಮಸ್ಯೆಗಳ ಕುರಿತು ಮಾನ್ಯ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವರ ಗಮನಕ್ಕೆ ತರಲಾಗಿತ್ತು.ಈ ಹಿನ್ನೆಲಯಲ್ಲಿ ಮಾನ್ಯ ಮುಖ್ಯ ಮಂತ್ರಿಗಳ ಸೂಚನೆ ಮೆರೆಗೆ ಇವತ್ತು ನಡೆಯಬೇಕಿದ್ದ ಕೌನ್ಸಲಿಂಗ್ ನ್ನು ತಾತ್ಕಾಲಿಕವಾಗಿ ಮೂಂದುಡಲಾಗಿದೆ. ಮುಂದಿನ ಆದೇಶದ ವರೆಗೂ ಕೌನ್ಸಲಿಂಗ್ ಲಿಂಗ ಪ್ರಕ್ರಿಯೆಗೆ ಬ್ರೇಕ ನೀಡಲಾಗಿದೆ ಎಂದರು..
ಶಿಕ್ಷಕರಿಗೆ ತೊಂದರೆಯಾಗುತ್ರಿರುವ ಹಿನ್ನಲೆಯಲ್ಲಿ ಮಾನ್ಯ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರು ಕೂಡ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ನಮ್ಮ ಸಂಘದಿಂದಲೂ ನಿರಂತರವಾಗಿ ಶಿಕ್ಷಣ ಸಚಿವರ ಜೊತೆ ಸಂಪರ್ಕದಲ್ಲಿ ಇದ್ದಿದ್ದರಿಂದ ಇವತ್ತು ಮಾನ್ಯ ಮುಖ್ಯ ಮಂತ್ರಿಗಳ ಗಮನಕ್ಕೆ ತಂದಿದ್ದೇವೆ ಎಂದರು..
ಶಿಕ್ಷಕರ ಮರು ಹೊಂದಾಣಿಕೆ_ಮುಂಬಡ್ತಿಯಲ್ಲಿ ಇರುವ ಗೊಂದಲಗಳನ್ನು ಸರಿಪಡಿಸಿದ ನಂತರ ಕೌನ್ಸಲಿಂಗ್ ಪ್ರಕ್ರಿಯೇ ಆರಂಭಿಸುವಂತೆ ಶಿಕ್ಷಣ ಸಚಿವ ರಲ್ಲಿ ಮನವಿ ಮಾಡಲಾಗಿದೆ ಎಂದರು..
ಈ ಕುರಿತಂತೆ ಮಾನ್ಯ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರ ಮನೆಗೆ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣ ಪ್ರಾತಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಬೃಹತ್ ನಿಯೋಗವು ಕೌನ್ಸಲಿಂಗ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿ. ಹೆಚ್ಷುವರಿ ಶಿಕ್ಷಕರ ಮರು ಹೊಂದಾಣಿಕೆ ಕುರಿತಂತೆ ಸಭಾಪತಿಗಳನ್ನು ಬೇಟಿಯಾಗಿ ಮನವಿ ಸಲ್ಲಿಸಿದ್ದರು..ಕೂಡಲೇ ಮಾನ್ಯ ಮುಖ್ಯ ಮಂತ್ರಿಗಳು ಮದ್ಯ ಪ್ರವೇಶಿಸಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಎರಡು ದಿನಗಳ ಹಿಂದೆ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶಿಕ್ಷಕರ ವರ್ಗಾವಣೆ _ಮರು ಹಂಚಿಕೆಗೆ ಇರುವ ಗೊಂದಲಗಳಿಗೆ ತೆರೆ ಎಳೆಯುವಂತೆ ವಿಧಾನ ಪರಿಷತ್ ಸದಸ್ಯ ಹಾಗೂ ಸಭಾಪತಿಯಾಗಿರುವ ಬಸವರಾಜ ಹೊರಟ್ಟಿಯವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿತ್ತು.
ಇವರೆಲ್ಲರ ಪ್ರಯತ್ನದಿಂದಾಗಿ ಇವತ್ತು ಶಿಕ್ಷಕರ ಕೌನ್ಸಲಿಂಗ್ ಪ್ರಕ್ರಿಯೆಗೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ..
ನಾಗೇಂದ್ರ ಕೆ. CRP ಆಗಿ 5 ವರ್ಷ 6 ತಿಂಗಳು ಆಗಿದೆ ನಮ್ಮನ್ನು 3 ವರ್ಷಕ್ಕೆ ನೇಮಕ ಮಾಡಿಕೊಂಡು ಇನ್ನೂ ಬಿಡುಗಡೆ ಭಾಗ್ಯ ಸಿಗಲಿಲ್ಲ
Eeds ತಿದ್ದುಪಡಿ ಹಾಗೂ roll back ಗೆ ಅವಕಾಶ ಕೊಡಬೇಕು ಏಕೆಂದರೆ ಅವಸರದಲ್ಲಿmutual applicatiin ಹಾಕಿರುವವರು application rejected ಆಗಿರುವುದರಿಂಡ್ ಕಷ್ಟ ದಲ್ಲಿದ್ದಾರೆ….
Today EEDS website is not functioning.