ಕ್ರೀಡಾಕೂಟ-ವಾರ್ಷಿಕ ಕೂಟದಲ್ಲಿ ಪಾಲ್ಗೊಂಡ ನೌಕರನ ದುರಂತ ಸಾವು…
ಓ ದೇವರೆ ನೀನೆಷ್ಟು ಕ್ರೂರಿ…
ಸಾವು ಹೀಗೂ ಬರುತ್ತಾ…??!!
ತಹಸೀಲ್ದಾರ್ ಕಚೇರಿಯೊಂದು ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಸಂಭ್ರಮದ ಬೆನ್ನಿಗೇ ಶೋಕ ಆವರಿಸಿದೆ. ಮಾತ್ರವಲ್ಲ, ಅಲ್ಲಿನ ನೌಕರನೊಬ್ಬನ ಪಾಲಿಗೆ ಅದೇ ಕೊನೇ ಊಟ, ಕೊನೆಯ ಕೂಟ ಎಂಬಂತಾಗಿದೆ.
ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಬಳಿ ಇರುವ ರೆಸಾರ್ಟ್ವೊಂದರಲ್ಲಿ ಈ ದುರಂತ ಸಂಭವಿಸಿದೆ.ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಬಳಿ ಇರುವ ರೆಸಾರ್ಟ್ವೊಂದರಲ್ಲಿ ಈ ದುರಂತ ಸಂಭವಿಸಿದೆ.ಕೊಪ್ಪಳ ತಹಸೀಲ್ದಾರ ಕಚೇರಿ ವತಿಯಿಂದ ಇಲ್ಲಿ ವಾರ್ಷಿಕ ಕೂಟ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಹಾಜರಾಗಿದ್ದ ಕಂದಾಯ ಇಲಾಖೆಯ ಎಸ್ಡಿಎ, ರಾಯಚೂರು ಮೂಲದ ತಾಯಪ್ಪ (26) ಎಂಬಾತ ಸಾವಿಗೀಡಾಗಿದ್ದಾನೆ.
ತಹಸೀಲ್ದಾರ್ ಕಚೇರಿ ವತಿಯಿಂದ ಭಾನುವಾರ ಇಲ್ಲಿ ವಾರ್ಷಿಕ ಕ್ರೀಡಾಕೂಟದ ಸಲುವಾಗಿ ಸಂತೋಷ ಕೂಟ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಊಟ ಮುಗಿದ ಬಳಿಕ ಸ್ವಿಮ್ಮಿಂಗ್ಪೂಲ್ಗೆ ಬಿದ್ದು ತಾಯಪ್ಪ ಸಾವಿಗೀಡಾಗಿದ್ದಾನೆ.
ತಾಯಪ್ಪ ಕೊಪ್ಪಳದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಪತಿಯ ಸಾವಿನಿಂದ ಪತ್ನಿ ದಿಗ್ಭ್ರಾಂತಳಾಗಿದ್ದು, ಕೊಪ್ಪಳ ಜಿಲ್ಲೆ ಮುನಿರಾಬಾದ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.